ಗದಗ: ತಲೆನೋವಿಗೆ ಬೇಸತ್ತು ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಗದಗ: ತಲೆನೋವಿಗೆ ಬೇಸತ್ತು ಯುವತಿ ಆತ್ಮಹತ್ಯೆ - woman commits suicide news
ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಣಕಾರ ಓಣಿಯ ನಿವಾಸಿ ಲಕ್ಷ್ಮೀ ಎಂಬುವವರು ತಲೆನೋವಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಲೆನೋವಿಗೆ ಬೇಸತ್ತು ಯುವತಿ ಆತ್ಮಹತ್ಯೆ
ಗದಗ ತಾಲೂಕಿನ ಮುಳಗುಂದ ಪಟ್ಟಣದ ಬಣಕಾರ ಓಣಿಯ ನಿವಾಸಿ ಲಕ್ಷ್ಮೀ (22) ನೇಣಿಗೆ ಶರಣಾದ ಯುವತಿ. ಈ ಹಿಂದೆ ಹಲವಾರು ಬಾರಿ ತಲೆನೋವಿಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು.
ಆದರೆ ತಲೆನೋವು ಕಡಿಮೆ ಆಗಿರಲಿಲ್ಲ. ಮುಂದೆಯೂ ಸಹ ಕಡಿಮೆ ಆಗುವುದಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.