ಗದಗ:ಗಜೇಂದ್ರಗಡ ಪಟ್ಟಣದಲ್ಲಿ ಜನರ ಮೇಲೆ ದಾಳಿ ನಡೆಸಿದ ನರಿಯನ್ನು ಸ್ಥಳೀಯರು ಅಟ್ಟಾಡಿಸಿ ಕೊಂದು ಹಾಕಿದ್ದಾರೆ. ಬುಧವಾರ ಬೆಳಗ್ಗೆ ಘಟನೆ ನಡೆಯಿತು. ಈ ನರಿ ಹಲವು ಜನರನ್ನು ಕಚ್ಚಿ ಗಾಯಗೊಳಿಸಿತ್ತು.
ಗಜೇಂದ್ರಗಡ: ಜನರ ಮೇಲೆ ದಾಳಿ ಮಾಡುತ್ತಿದ್ದ ನರಿ ಹತ್ಯೆ - ಬಿಂಕದಕಟ್ಟಿ ಮೃಗಾಲಯ
ಗಜೇಂದ್ರಗಡದಲ್ಲಿ ಜನರ ಮೇಲೆ ದಾಳಿ ಮಾಡಿದ ನರಿಯನ್ನು ಬೆನ್ನಟ್ಟಿ ಕೊಂದು ಹಾಕಲಾಗಿದೆ.
ಗಜೇಂದ್ರಗಡಕ್ಕೆ ದಾಳಿಯಿಟ್ಟ ನರಿ
ಮಂಗಳವಾರ ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರ ಸಂಸ್ಥೆಯ ಪ್ರೌಢಶಾಲೆಯ ಆವರಣದಲ್ಲಿ ಕಾಣಿಸಿಕೊಂಡ ನರಿ ಸಾರ್ವಜನಿಕರನ್ನು ಚಿಂತೆಗೀಡು ಮಾಡಿತ್ತು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ನರಿಯನ್ನು ಬಲೆಯೊಳಗೆ ಸೆರೆ ಹಿಡಿದು ಬಿಂಕದಕಟ್ಟಿ ಮೃಗಾಲಯಕ್ಕೆ ಬಿಟ್ಟಿದ್ದರು. ಆದರೆ ಮತ್ತೆ ಗಜೇಂದ್ರಗಡ ಪಟ್ಟಣದಲ್ಲಿ ಕಾಣಿಸಿಕೊಂಡಿತ್ತು.
ಇದನ್ನೂಓದಿ:ಅಮೆರಿಕದಂತೆ ಬೆಂಗಳೂರಲ್ಲೂ ಕಳ್ಳನೋಟಿನ ಜಾಲ: ಸಿಸಿಬಿ ಪೊಲೀಸರಿಗೇ ಶಾಕ್