ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಕೃಷಿ ಅಧಿಕಾರಿಗಳು ರೈತರಿಗೆ ನೀಡಬೇಕಾಗಿರುವ ತಾಡಪತ್ರಿಗಳನ್ನು ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ಕೊಡುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.
ತಾಡಪತ್ರಿ ಪಡೆಯಲು ಪರದಾಟ: ಶಿರಹಟ್ಟಿ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ! - ಕೃಷಿ ಇಲಾಖೆ ವಿರುದ್ದ ರೈತರ ಆಕ್ರೋಶ
ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಕೃಷಿ ಅಧಿಕಾರಿಗಳು ರೈತರಿಗೆ ನೀಡಬೇಕಾಗಿರುವ ತಾಡಪತ್ರಿಗಳನ್ನು ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ಕೊಡುತ್ತಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ.
ನಾವು ಕಳೆದ ಎರೆಡ್ಮೂರು ದಿವಸದಿಂದ ಎರಡುನೂರಕ್ಕೂ ಹೆಚ್ಚು ರೈತರು ಮಳೆ ಚಳಿ ಎನ್ನದೇ ಕಾಯುತ್ತಾ ನಿಂತಿದ್ದೇವೆ. ಆದರೆ ಶನಿವಾರ ಮತ್ತು ಭಾನುವಾರ ರಜೆ ಇದೆ ಅಂತ ಹೇಳಿ ನಮ್ಮನ್ನು ವಾಪಾಸ್ ಕಳಿಸಿದ್ದಾರೆ. ಇಂದು ಮತ್ತೆ ಪುನಃ ಬಂದ್ರೆ ತಾಡಪತ್ರಿ ಖಾಲಿಯಾಗಿವೆ ಅಂತ ಹೇಳ್ತಿದಾರೆ. ನಾವೆಲ್ಲ ಮೊದಲೇ ಅರ್ಜಿ ಕೊಟ್ಟು ಕಾಯುತ್ತಾ ನಿಂತಿದ್ದೆವು. ಆದರೆ ದುಡ್ಡು ಪಡೆದು ಬ್ಲ್ಯಾಕ್ನಲ್ಲಿ ಕೊಟ್ಟಿದ್ದಾರೆ ಅಂತಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಬಗ್ಗೆ ಸಹಾಯಕ ಕೃಷಿ ಅಧಿಕಾರಿಗಳನ್ನು ಕೇಳಿದ್ರೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶನಿವಾರ ಹಾಗೂ ಭಾನುವಾರ ರಜೆ ಇದ್ರೂ ಸಹ ತುರ್ತಾಗಿ ಎಲ್ಲಾ ತಾಡಪತ್ರಿಗಳನ್ನ ಮನೆ ಕಳೆದುಕೊಂಡ ರೈತರಿಗೆ ವಿತರಿಸಿದ್ದೇವೆ. ಹಣ ಪಡೆದು ಯಾವ ಅಧಿಕಾರಿಗಳು ಸಹ ತಾಡಪತ್ರಿ ವಿತರಿಸಿಲ್ಲ. ಇನ್ನಷ್ಟು ತಾಡಪತ್ರಿ ನೀಡುವಂತೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಬಂದ ತಕ್ಷಣ ಎಲ್ಲ ರೈತರಿಗೂ ವಿತರಿಸುತ್ತೇವೆ ಎಂದು ರೈತರ ಆರೋಪವನ್ನು ಅಲ್ಲಗಳೆದಿದ್ದಾರೆ.