ಗದಗ : ಮಾರುಕಟ್ಟೆಗೆ ನಕಲಿ ಬಿತ್ತನೆ ಬೀಜ ಲಗ್ಗೆಯಿಟ್ಟಿದೆ ಅನ್ನೋ ಮಾತುಗಳು ರೈತಾಪಿ ವರ್ಗವನ್ನು ಕಾಡುತ್ತಿವೆ. ಅಲ್ಲದೆ ಅವುಗಳು ಚೀನಾದಿಂದ ಆಮದಾಗಿರೋ ಜೈವಿಕ ಬಿತ್ತನೆ ಬೀಜಗಳಾಗಿದ್ದು, ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕೇಂದ್ರ ಕೃಷಿ ಇಲಾಖೆ ಈಗಾಗಲೇ ಸೂಚನೆ ನೀಡಿದೆ.
ನಕಲಿ ಬಿತ್ತನೆ ಬೀಜ ರವಾನೆ ಬಗ್ಗೆ ಕೇಂದ್ರ ಕೃಷಿ ಸಚಿವಾಲಯ ಎಚ್ಚರಿಕೆ: ಗದಗ್‌ನಲ್ಲೂ ಆವರಿಸಿದೆ ಭೀತಿ - ನಕಲಿ ಬಿತ್ತನೆ ಬೀಜ ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ರವಾನೆ
ಚೀನಾ ದೇಶ ನಕಲಿ ಬಿತ್ತನೆ ಬೀಜಗಳನ್ನು ಸೃಷ್ಟಿಸಿ ಭಾರತೀಯ ರೈತರಿಗೆ ಕಳುಹಿಸುತ್ತಿರುವುದಾಗಿ ಕೇಂದ್ರ ಕೃಷಿ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆ ಗದಗ ಜಿಲ್ಲೆಯ ರೈತರು ನಕಲಿ ಬೀಜ ಹಾವಳಿಗೆ ಕಂಗಾಲಾಗಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ನಕಲಿ ಬೀಜ ರವಾನೆ
ಚೀನಾ ಜೈವಿಕ ಬಿತ್ತನೆ ಬೀಜಗಳನ್ನು ಭಾರತೀಯ ರೈತರ ಮನೆಗೆ ಪಾರ್ಸಲ್ ಕಳುಹಿಸುತ್ತಿದೆ. ಕೊರೊನಾ ಹರಡಿರೋ ಚೀನಾದ ಈ ಕೃತ್ಯವನ್ನೀಗ ಗದಗ ಜಿಲ್ಲೆಯ ರೈತರು ಖಂಡಿಸಿದ್ದಾರೆ. ಜೊತೆಗೆ ನಕಲಿ ಬೀಜ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.