ಗದಗ: ಕಳೆದ ಹಲವು ದಿನಗಳಿಂದ ಹುಲಕೋಟಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ 80 ಸಾವಿರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಪೊಲೀಸರ ದಾಳಿ: 4 ಕೆ.ಜಿ ಗಾಂಜಾ ವಶಕ್ಕೆ, ಆರೋಪಿ ಪರಾರಿ - marijuana and drugs latest news
ಅಕ್ರಮವಾಗಿ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ 80 ಸಾವಿರ ರೂ. ಮೌಲ್ಯದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Police
ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ವೇಳೆ ಆರೋಪಿ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಮಹಿಳೆ ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಎಂದು ಗುರುತಿಸಲಾಗಿದ್ದು, ನಾಲ್ಕು ಕೆ.ಜಿ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗುರುರಾಜ್ ವಸ್ತ್ರದ, ಚಂದ್ರು ರಾಠೋಡ್, ನಜೀರ ಖುದಾವಂದ, ಸುರೇಶ್ ಮಳೇಕರ್, ಸವಿತಾ ಕೋಳಿವಾಡ ಪಾಲ್ಗೊಂಡಿದ್ದರು.