ಗದಗ:ಉತ್ತರಕರ್ನಾಟಕದ ನೆರೆ ಸಂತ್ರಸ್ತರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪರಿಹಾರ ಹರಿದು ಬರ್ತಿದೆ. ಅದೇ ರೀತಿ ಹಲವು ನಾಯಕರೂ ಸಹ ನೆರವು ನೀಡಲು ಮುಂದಾಗಿದ್ದಾರೆ. ಮಲಪ್ರಭಾ ನದಿಯ ಪ್ರವಾಹಕ್ಕೆ ಬಳಲಿ ಬೆಂಡಾದ ನೆರೆಪೀಡಿತ ಸಂತ್ರಸ್ತರ ಕಷ್ಟಕ್ಕೆ ಇದೀಗ ಮಾಜಿ ಸಚಿವ ಡಿ ಸಿ ತಮ್ಮಣ್ಣ ಸಹ ಸ್ಪಂದಿಸಿದ್ದಾರೆ.
ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಮಾಜಿ ಸಚಿವ ಡಿ ಸಿ ತಮ್ಮಣ್ಣ ಅವರದು ದೊಡ್ಡಣ್ಣನ ಗುಣ..
ಮಲಪ್ರಭ ನದಿಯ ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೀಡಾದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಪರಿಹಾರ ಹರಿದು ಬರುತ್ತಿದೆ. ಇದೀಗ ಮಾಜಿ ಸಚಿವ ಡಿ ಸಿ ತಮ್ಮಣ್ಣ ಸಹ ಸ್ಪಂದಿಸಿದ್ದು, ಪರಿಹಾರ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಡಿ ಸಿ ತಮ್ಮಣ್ಣ ಸೇವಾ ಪ್ರತಿಷ್ಠಾನದ ಮೂಲಕ ಈ ಪರಿಹಾರ ಕಾರ್ಯ ಕೈಗೊಂಡಿದ್ದು, ಸ್ವತಃ ಡಿ ಸಿ ತಮ್ಮಣ್ಣ, ಪುತ್ರಿ ಸೌಮ್ಯ ಹಾಗೂ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಪರಿಹಾರ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಗದಗ ಜಿಲ್ಲೆ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಲ್ಲಿ 6 ಲೋಡ್ ರೇಷನ್ ಡಿ ಸಿ ತಮ್ಮಣ್ಣ ಹಂಚಿಕೆ ಮಾಡಿದ್ದಾರೆ. ನೆರೆಪೀಡಿತ ಉತ್ತರ ಕರ್ನಾಟಕದತ್ತ ಮುಖ ಮಾಡಿರುವುದು ಜನತೆಗೆ ಸಂತಸ ತಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತಮ್ಮಣ್ಣ, ನೆರೆಯಿಂದಾಗಿ ಜನರು ಸಂಕಷ್ಟ ಪಡುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸೋದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಪ್ರತಿಷ್ಠಾನದಿಂದ ನೆರೆಪೀಡಿತ ಪ್ರದೇಶಗಳಿಗೆ 8 ಲೋಡ್ ರೇಷನ್ ಸರಬರಾಜು ಮಾಡಲಾಗ್ತಿದೆ. ಇದರಲ್ಲಿ 2 ಶಿವಮೊಗ್ಗಕ್ಕೆ ಇನ್ನುಳಿದ 6 ಲೋಡ್ ಗದಗ ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ನೀಡಲಾಗುತ್ತಿದೆ ಎಂದರು.