ಕರ್ನಾಟಕ

karnataka

By

Published : Mar 20, 2020, 1:13 PM IST

ETV Bharat / state

ಗದಗದಲ್ಲಿ ಕೊರೊನಾ ಸ್ಥಿತಿಗತಿ... ಅಂಕಿ ಅಂಶ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಹಿರೇಮಠ

ಗದಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. 9 ಜನ ಹೊಸದಾಗಿ ನಿಗಾದಲ್ಲಿ ಸೇರ್ಪಡೆಯಾಗಿದ್ದು, ನಿಗಾಕ್ಕೆ ಒಳಗಾದವರ ಸಂಖ್ಯೆ 90 ಹಾಗೂ 25ದಿನಗಳ ನಿಗಾ ಅವಧಿ ಪೂರೈಸಿದವರು 7 ಜನ ಎಂದು ತಿಳಿಸಿದ್ದಾರೆ.

ಹಿರೇಮಠ
ಹಿರೇಮಠ

ಗದಗ: ಜಿಲ್ಲೆಯಲ್ಲಿ ಕೊರೊನಾ ಪಿಡುಗನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿರುವ ಆದೇಶದನ್ವಯ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂದು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ. 9 ಜನ ಹೊಸದಾಗಿ ನಿಗಾದಲ್ಲಿ ಸೇರ್ಪಡೆಯಾಗಿದ್ದು, ನಿಗಾಕ್ಕೆ ಒಳಗಾದವರ ಸಂಖ್ಯೆ 90 ಹಾಗೂ 25ದಿನಗಳ ನಿಗಾ ಅವಧಿ ಪೂರೈಸಿದವರು 7 ಜನ ಎಂದು ತಿಳಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹಿರೇಮಠ

ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ 80, ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ 3, ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 14 ಮಾದರಿಗಳಲ್ಲಿ 12 ನಕಾರಾತ್ಮಕ (ನೆಗೆಟಿವ್) ಎಂದು ವರದಿಯಾಗಿದೆ ಇನ್ನು ಎರಡು ವರದಿ ಬಾಕಿ ಇದೆ ಎಂದು ತಿಳಿಸಿದ್ದಾರೆ.

ಜಿಲ್ಲೆಗೆ ವಿದೇಶಗಳಿಂದ ಬಂದವರ ತಾಲೂಕಾವಾರು ಸಂಖ್ಯೆ ನರಗುಂದ 16, ರೋಣ 8, ಶಿರಹಟ್ಟಿ 20, ಮುಂಡರಗಿ 4 , ಗದಗ 40 ಹಾಗೂ ಜಿಲ್ಲೆಯ ಹೊರಗಿನವರು 2, ಒಟ್ಟು 90

ABOUT THE AUTHOR

...view details