ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಗೆ ಕೇಂದ್ರ ನೆರೆ ಪರಿಶೀಲನಾ ತಂಡ ಭೇಟಿ, ಸಂತ್ರಸ್ತರ ಗೋಳು ಕೇಳಿದ ಅಧಿಕಾರಿಗಳು - ಪ್ರಕಾಶ್,

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ತಂಡ ಇಂದು ಗದಗ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನೆರೆಯಿಂದುಂಟಾದ ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿದ ಈ ತಂಡ ಆದಷ್ಟು ಬೇಗ ಹಣಕಾಸಿನ ನೆರವು ದೊರಕುವಂತೆ ನೋಡಿಕೊಳ್ಳುತ್ತೇವೆಂದು ಜನರಿಗೆ ಭರವಸೆ ನೀಡಿದೆ.

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್

By

Published : Aug 26, 2019, 7:15 PM IST

ಗದಗ: ಇಂದು ಗದಗ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ ಜಿಲ್ಲೆಗೆ ಕೇಂದ್ರ ನೆರೆ ಪರಿಶೀಲನಾ ತಂಡ ಭೇಟಿ

ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಈ ತಂಡ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮ ಬಳಿಯ ಸೇತುವೆ ವೀಕ್ಷಣೆ ಮಾಡಿತು. ನಂತರ, ಹೊಳೆ ಆಲೂರಿನ ಪರಿವೀಕ್ಷಣಾ ಮಂದಿರದಲ್ಲಿ ನೆರೆ ಕುರಿತು ಗದಗ ಜಿಲ್ಲಾಧಿಕಾರಿ ಎಮ್​.ಜಿ ಹಿರೇಮಠ ಅವರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲಿಂದ ನೇರವಾಗಿ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ತೆರಳಿ, ಸರ್ಕಾರಿ ಶಾಲೆ ಹಾಗೂ ಹಾನಿಗೊಳಗಾದ ಕೆಲ ಮನೆಗಳನ್ನು ನೋಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಮಾತನಾಡಿದ ಪ್ರಕಾಶ್, ಪ್ರವಾಹ ಪೀಡಿತ ಸಂತ್ರಸ್ತ ಸ್ಥಳಗಳ ಅವಲೋಕನ ಮಾಡಲು ಬಂದಿದ್ದೇವೆ, ಎಲ್ಲ ಅಧ್ಯಯನ ಮಾಡಿ ವರದಿ ಕೊಡುತ್ತೇವೆ. ಮತ್ತೊಮ್ಮೆ ಪ್ರವಾಹ ಅಧ್ಯಯನಕ್ಕೆ ರಾಜ್ಯ ಸರ್ಕಾರ ಬನ್ನಿ ಎಂದರೆ ಬರುತ್ತೇವೆ ಎಂದರು. ಜೊತೆಗೆ, ಜನರೊಂದಿಗೂ ಸಹ ಮಾತನಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಅದಷ್ಟು ಬೇಗ ಹಣಕಾಸಿನ ನೆರವು ದೊರಕುವಂತೆ ನೋಡಿಕೊಳ್ಳುತ್ತೇವೆಂದು ಜನರಿಗೆ ಭರವಸೆ ನೀಡಿದರು.

ABOUT THE AUTHOR

...view details