ಗದಗ: ಕೋವಿಡ್- 19 ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ, ಆರೋಗ್ಯ ಸಚಿವ ಶ್ರೀರಾಮುಲು ಅವರ ಆಪ್ತ ಎಸ್. ಹೆಚ್ ಶಿವನಗೌಡ ವಿರುದ್ಧ ದೂರು ದಾಖಲಾಗಿದೆ.
ನಿಮಯ ಉಲ್ಲಂಘಿಸಿ ಬರ್ತ್ಡೇ ಪಾರ್ಟಿ: ಸಚಿವ ಶ್ರೀರಾಮುಲು ಆಪ್ತ ಶಿವನಗೌಡ ವಿರುದ್ಧ ದೂರು ದಾಖಲು - Gadag latest news
ಜು.10 ರಂದು ಗದಗ ನಗರದ ಶ್ರೀನಿವಾಸ ಭವನದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದ ಸಚಿವ ಶ್ರೀರಾಮುಲು ಆಪ್ತ ಎಸ್. ಹೆಚ್ ಶಿವನಗೌಡ ವಿರುದ್ಧ ಕೇಸ್ ದಾಖಲಾಗಿದೆ.
ಗದಗ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ. ಬರ್ತಡೇ ಪಾರ್ಟಿ ಮಾಡಿರೋ ವಿಚಾರ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಶನಿವಾರದಂದು ಸ್ವಯಂ ದೂರು ದಾಖಲಿಸಿತ್ತು. ಇಂದು ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಇನ್ನು ಈ ಬಗ್ಗೆ ಸ್ಪಷ್ಟಪಡಿಸಿರೋ ಗದಗ ಎಸ್‌ಪಿ ಎನ್. ಯತೀಶ್ ಅವರು ವಿಪತ್ತು ನಿರ್ವಹಣಾ ಕಾಯ್ದೆ ಅಡಿ, ಐಪಿಸಿ 188 ಅಡಿಯಲ್ಲಿ ಪೊಲೀಸರಿಂದ ದೂರು ದಾಖಲಾಗಿದೆ. ಭಾನುವಾರ ಕೋರ್ಟ್ ರಜೆ ಇದ್ದ ಕಾರಣ ಶಿವನಗೌಡ ಅವರನ್ನು ಇಂದು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಜು.10 ರಂದು ಗದಗ ನಗರದ ಶ್ರೀನಿವಾಸ್ ಭವನದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಭರ್ಜರಿ ಪಾರ್ಟಿ ಮಾಡಿದ್ರು. ಈ ವಿಷಯ ಬಹಿರಂಗವಾದ ಬಳಿಕ ಶಿವನಗೌಡ ಅವರನ್ನು ಭಾನುವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ.