ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಪರ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚಾರಿಂದ ಮತಬೇಟೆ - karnataka politics

ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅನೀಲ್​ ಮೆಣಸಿನಕಾಯಿ ಪರ ನಟ ಭುವನ್​ ಪೊನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚಾ ಪರ ಇಂದು ಪ್ರಚಾರ ನಡೆಸಿದರು.

bhuvan-ponnanna-and-harshika-poonachhar-canvassing-for-anil-menasinakai
ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಪರ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚಾರಿಂದ ಮತಬೇಟೆ

By

Published : Apr 23, 2023, 4:49 PM IST

ಗದಗ:ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅವರ ಚುನಾವಣಾ ಪ್ರಚಾರಕ್ಕೆ ಭಾನುವಾರ ತಾರಾ ಮೆರಗು ಸಿಕ್ಕಿತು. ಸ್ಯಾಂಡಲ್​ವುಡ್ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚಾ ಗದಗ-ಬೆಟಗೇರಿ ಅವಳಿ ನಗರದಲ್ಲಿ ಅನೀಲ್ ಮೆಣಸಿನಕಾಯಿ ಪರ ಮತಯಾಚಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಯಂದು ಭರ್ಜರಿ ರೋಡ್ ಶೋ ನಡೆಸಿದ್ದ ನಟ ಕಿಚ್ಚ ಸುದೀಪ್ ಬೊಮ್ಮಾಯಿ ಅವರನ್ನು ಶಿಗ್ಗಾಂವಿ ಕ್ಷೇತ್ರದ ಜನರ ಸಹಕಾರದೊಂದಿಗೆ ಗೆಲ್ಲಿಸಿಯೇ ಹೋಗುತ್ತೇನೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅವರ ಪರವೂ ಸ್ಟಾರ್ ನಟ, ನಟಿಯರು ಪ್ರಚಾರಕ್ಕೆ ಧುಮುಕುತ್ತಿದ್ದಾರೆ.

ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚಾರಿಂದ ಮತಬೇಟೆ

ಬೇಸಿಗೆಯ ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ನಟ-ನಟಿ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಹರ್ಷಿಕಾ ಪೂಣಚ್ಚಾ, ನನಗೆ ಮತ್ತು ಅನೀಲ್ ಮೆಣಸಿನಕಾಯಿ ಅವರಿಗೆ ಬಹಳ ವರ್ಷಗಳಿಂದ ಪರಿಚಯವಿದೆ. ಅವರೊಬ್ಬ ಉತ್ತಮ ಅಭ್ಯರ್ಥಿಯಾಗಿದ್ದು, ಸ್ವ-ಇಚ್ಛೆಯಿಂದ ಪ್ರಚಾರಕ್ಕೆ ಬಂದಿದ್ದೇವೆ. ಗದಗ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇದೆ. ಆದರೆ, ದುರಾದೃಷ್ಟವಶಾತ್ ಕಳೆದ ಬಾರಿ ಕಡಿಮೆ ಅಂತರದಿಂದ ಸೋಲುಂಡರು. ಈ ಬಾರಿ ಗದಗದ ಕಾರ್ಯಕರ್ತರ ಸಹಕಾರ, ಬೆಂಬಲದೊಂದಿಗೆ ಅನೀಲ್ ಮೆಣಸಿನಕಾಯಿ ಅವರನ್ನು ಗೆಲ್ಲಿಸಲೇಬೇಕೆಂದು ಬಿಸಿಲು ಲೆಕ್ಕಿಸದೆ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಪ್ರಚಾರದ ಸಂದರ್ಭದಲ್ಲಿ ಜನರ ಮುಖದಲ್ಲಿ ಅನೀಲ್ ಮೆಣಸಿನಕಾಯಿ ಅವರ ಮೇಲಿನ ಪ್ರೀತಿ ಎದ್ದು ಕಾಣಿಸುತ್ತಿದೆ. ಈವರೆಗೆ ಒಬ್ಬರನ್ನೇ ಗೆಲ್ಲಿಸಿದ್ದೇವೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಪುನಃ ಅಂತವರನ್ನೇ ಗೆಲ್ಲಿಸಿದರೆ ಕ್ಷೇತ್ರದ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಈ ಬಾರಿ ಅನೀಲ್ ಮೆಣಸಿನಕಾಯಿ ಅವರಿಗೆ ಸೇವೆಗೆ ಅವಕಾಶ ಕೊಡುತ್ತೇವೆ. ಅವಳಿ ನಗರದಲ್ಲಿ ಮನೆ ಮುಂದಿನ ಮೋರಿಗಳು ಸರಿ ಇಲ್ಲ. ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಗದಗ-ಬೆಟಗೇರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅನೀಲ್ ಮೆಣಸಿನಕಾಯಿ ಗೆದ್ದ ಮೇಲೆ ಉತ್ತಮ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.

ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚಾರಿಂದ ಮತಬೇಟೆ

ನಟ ಭುವನ್ ಪೊನ್ನಣ್ಣ ಮಾತನಾಡಿ, ಕಳೆದ ಬಾರಿಗಿಂತ ಈ ಸಲ ಕ್ಷೇತ್ರದ ಜನತೆಗೆ ಅನೀಲ್ ಮೆಣಸಿನಕಾಯಿ ಅವರ ಮೇಲಿನ ಪ್ರೀತಿ ಹೆಚ್ಚಾಗಿದೆ. ಕಳೆದ ಬಾರಿ ಗೆದ್ದು ಸೋತಿದ್ದರಿಂದ ಬಹಳಷ್ಟು ನೊಂದಿದ್ದರು‌. ಆದರೂ, ಕ್ಷೇತ್ರದ ಜನತೆಯ ಸೇವೆ ನಿಲ್ಲಿಸದೇ, ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದು, ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾರ್ಯಕರ್ತರ ಶ್ರಮ ಈ ಬಾರಿ ವ್ಯರ್ಥವಾಗುವುದಿಲ್ಲ. ನಾನು 10 ವರ್ಷಗಳ ಹಿಂದೆ ಗದಗ ಹೇಗಿತ್ತೊ ಈಗಲೂ ಹಾಗೆ ಇದೆ. ಒಂದಿಷ್ಟು ಸುಧಾರಣೆಯಾಗಿಲ್ಲ. ಹೀಗಾಗಿ ನನ್ನ ಸ್ನೇಹಿತ ಅನೀಲ್ ಮೆಣಸಿನಕಾಯಿ ಅವರಿಗೆ ಈ ಬಾರಿ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಪ್ರಚಾರದ ಸಂದರ್ಭದಲ್ಲಿ ಮಂಜುನಾಥ ಮುಳಗುಂದ, ವಿಜಯಲಕ್ಷ್ಮಿ ಮಾನ್ವಿ, ಗೋಪಾಲ ಗಡಾದ, ವೆಂಕಟೇಶ ಹಬೀಬ, ಸ್ವಾತಿ ಅಕ್ಕಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.

ಇದನ್ನೂ ಓದಿ:ನಟಿ ರಮ್ಯಾರನ್ನು ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ: ಸಚಿವ ಆರ್.ಅಶೋಕ್ ಟಾಂಗ್​

ABOUT THE AUTHOR

...view details