ಗದಗ:ತಾಲೂಕಿನ ಮುಳಗುಂದದ ಸಮೀಪದ ಶಿರೋಳ ಗ್ರಾಮದ ಹೊರವಲಯದ ತೋಟದ ಬಾವಿಯಲ್ಲಿ ಸೋಮವಾರ ತಾಯಿ ಎರಡು ಮಕ್ಕಳ ಶವ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪತಿ ಸೇರಿದಂತೆ ಮೂವರನ್ನು ಮುಳಗುಂದ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿ ಬಸಯ್ಯ, ಮಾವ ಚನ್ನಬಸಯ್ಯ ಮತ್ತು ರುದ್ರವ್ವ ಈ ಮೂರು ಜನ ಸೇರಿ ವಿನಾಕಾರಣ ಮಹಿಳೆಯ ಮೇಲೆ ಸಂಶಯ ವ್ಯಕ್ತಪಡಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.