ಗದಗ:ಅಫ್ಘಾನಿಸ್ತಾನವನ್ನು ತಾಲಿಬಾನ್ಗಳು ವಶಪಡಿಸಿಕೊಂಡ ನಂತರ ಅಲ್ಲಿನ ಸ್ಥಿತಿ ಹೇಳತೀರದ್ದಾಗಿದೆ. ರಾಯಭಾರ ಕಚೇರಿ ಭದ್ರತೆಗಿದ್ದ ಯೋಧರು ಸೇರಿ ಅನೇಕ ಭಾರತೀಯರು ತಾಲಿಬಾನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದ್ದರು. ಸದ್ಯ ಅವರನ್ನೆಲ್ಲಾ ಏರ್ಲಿಫ್ಟ್ ಮಾಡುವ ಮೂಲಕ ತಾಯ್ನಾಡಿಗೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.
ತವರಿಗೆ ಬಂದ ಯೋಧರಲ್ಲಿ ಮುದ್ರಣ ಕಾಶಿ ಗದಗ ಜಿಲ್ಲೆಯ ಬಳಗಾನೂರು ಗ್ರಾಮದ ರವಿ ನೀಲಗಾರ ಸಹ ಇದ್ದರು. 12 ವರ್ಷಗಳ ಹಿಂದೆಯೇ ITBP ಪಡೆಗೆ ಸೇರಿರುವ ರವಿ, ಎರಡು ವರ್ಷಗಳಿಂದ ಆಫ್ಘನ್ನಲ್ಲಿರುವ ರಾಯಭಾರ ಕಚೇರಿಯ ಭದ್ರತಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದೇ ತಡ ಭಾರತೀಯ ಸೈನ್ಯವನ್ನ ಕೇಂದ್ರ ಸರ್ಕಾರ ತವರಿಗೆ ಕರೆಸಿಕೊಂಡಿದೆ. ಹೀಗೆ ಯೋಧ ರವಿ ನೀಲಗಾರ ಸಹ ತವರಿಗೆ ಬಂದಿದ್ದು, ಕುಟುಂಬ ನಿಟ್ಟುಸಿರು ಬಿಟ್ಟಿದೆ.