ಗದಗ:ನರಗುಂದದಲ್ಲಿ ರೈತ ಬಂಡಾಯ ನಡೆದು ಇಂದಿಗೆ 41 ವರ್ಷಗಳಾಗಲಿವೆ. ಹೀಗಾಗಿ, ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿಂದು ಬಂಡಾಯದಲ್ಲಿ ಮಡಿದ ರೈತ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.
ನರಗುಂದದಲ್ಲಿಂದು 41ನೇ ರೈತ ಹುತಾತ್ಮ ದಿನಾಚರಣೆ: ರಾಷ್ಟ್ರ ನಾಯಕರ ಸಮಾಗಮ
ನರಗುಂದದಲ್ಲಿ ಇಂದು 41ನೇ ರೈತ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತಿದ್ದು, ಬೃಹತ್ ಸಮಾವೇಶದಲ್ಲಿ ರಾಷ್ಟ್ರ ನಾಯಕರ ಸಮಾಗಮವಾಗಲಿದೆ.
ರೈತ ಸೇನಾ ಕರ್ನಾಟಕ, ಕರ್ನಾಟಕ ರೈತ ಸೇನಾ, ಕೆಪಿಆರ್ಎಸ್, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಉತ್ತರ ಕರ್ನಾಟಕ ರೈತ ಸಂಘ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಒಕ್ಕೂಟ ನರಗುಂದ, ಜನಾಂದೋಲನಗಳ ಮಹಾಮೈತ್ರಿ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಗಳ ಸಹಯೋಗದಲ್ಲಿ ರೈತ ಹುತಾತ್ಮ ದಿನ ಏರ್ಪಡಿಸಲಾಗಿದೆ.
ರೈತ ಹೋರಾಟಕ್ಕೆ ದಿಕ್ಸೂಚಿ ನೀಡಿದ ಈ ಐತಿಹಾಸಿಕ ದಿನದ ಕಾರ್ಯಕ್ರಮಕ್ಕೆ ರಾಷ್ಟ್ರೀಯ ರೈತ ಹೋರಾಟದ ಮೂಂಚೂಣಿ ನಾಯಕರಾದ ಪಂಜಾಬ್ನ ಹರಿಖೇತ್ ಸಿಂಗ್, ಹರಿಯಾಣದ ದೀಪಕ್ ಲಂಬಾ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಮಾಲಿ ಪಾಟೀಲ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪೂರ ನಾಗೇಂದ್ರ, ಮಹಾದಾಯಿ ಹೋರಾಟದ ರೂವಾರಿಗಳಾದ ಶಂಕರ ಅಂಬಲಿ, ವಿರೇಶ ಸೊಬರದಮಠ ಸೇರಿದಂತೆ ಸಾವಿರಾರು ರೈತ ಬಾಂಧವರು ಪಾಲ್ಗೊಳ್ಳಲಿದ್ದಾರೆ.