ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ 19 ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿವೆ. ಈ ಮೂಲಕ ಸೋಂಕಿತರ 199ಕ್ಕೆ ಏರಿಕೆಯಾಗಿದೆ. ಇದರಲ್ಲಿ 7 ವರ್ಷದ ಮಗು ಸಹ ಸೇರಿಕೊಂಡಿದೆ. ಗದಗಿನ ಸಿದ್ದರಾಮೇಶ್ವರ ನಗರ ನಿವಾಸಿ 31 ವರ್ಷದ ಪುರುಷ ಪಿ-10148 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 31 ವರ್ಷದ ಪುರುಷ ಪಿ-18272 ಹಾಗೂ 24 ವರ್ಷದ ಮಹಿಳೆ ಪಿ-18273ಗೆ ಸೋಂಕು ದೃಢವಾಗಿದೆ.
ಗುಜರಾತ್ನಿಂದ ಜುಲೈ 2ರಂದು ಜಿಲ್ಲೆಗೆ ಆಗಮಿಸಿದ್ದ ಗದಗ ತಾಲೂಕಿನ ಮಲ್ಲಸಮುದ್ರದ ಜಿಮ್ಸ್ ಹಾಸ್ಟೆಲ್‌ನ 19 ವರ್ಷದ ಯುವಕ ಪಿ-18283 ಮಹರಾಷ್ಟದಿಂದ ಜೂನ್ 30ರಂದು ಆಗಮಿಸಿದ್ದ ಕಳಸಾಪುರ ರಿಂಗ್ ರೋಡ್ ಪ್ರದೇಶದ 33 ವರ್ಷದ ಪುರುಷ ಪಿ-18289 ಹಾಗೂ ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಆಗಮಿಸಿದ ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜ ಮಠದ ಹತ್ತಿರದ ನಿವಾಸಿ 60 ವರ್ಷದ ಮಹಿಳೆ ಪಿ-18271 ಇವರಿಗೆ ಜ್ವರ ಹಾಗೂ ಕೆಮ್ಮು ರೋಗ ಲಕ್ಷಣದಿಂದಾಗಿ ದೃಢಪಟ್ಟಿದೆ.
ಇನ್‌ಪ್ಲೂಯೆಂಜಾ ರೋಗ ಲಕ್ಷಣಗಳಿರುವ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದ ಮಲ್ಲಸಮುದ್ರದ ಅಂಜುಮನ್ ಕಾಲೇಜ್ ಹತ್ತಿರದ ನಿವಾಸಿ 31 ವರ್ಷದ ಪುರುಷ, ಪಿ-18280 ಗದಗ ನಗರದ ಕಾಗದಗೆರೆ ನಿವಾಸಿ 60 ವರ್ಷದ ಮಹಿಳೆ ಪಿ-18281 ಹಾಗೂ ಹರ್ತಿ ಗ್ರಾಮದ ಈರಣ್ಣ ದೇವಸ್ಥಾನ ಹತ್ತಿರದ ನಿವಾಸಿ 22 ವರ್ಷದ ಮಹಿಳೆ ಪಿ-18287ಗೆ ಸೋಂಕು ದೃಢಪಟ್ಟಿದೆ.
ತಾಲೂಕಿನ ಬೆಳದಡಿ ಗ್ರಾಮದ ಶಾಲೆಯ ಹಿಂಭಾಗದ ನಿವಾಸಿ 40 ವರ್ಷದ ಪುರುಷ ಪಿ-18286 ಅಡವಿ ಸೋಮಾಪುರ ತಾಂಡಾ ನಿವಾಸಿ 60 ವರ್ಷದ ಮಹಿಳೆ ಪಿ-18288ಗೆ ಸೋಂಕು ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆಯುತ್ತಿದೆ.