ಕರ್ನಾಟಕ

karnataka

ETV Bharat / state

ಯೋಗೀಶಗೌಡ ಹತ್ಯೆ ಪ್ರಕರಣ: ಸುಫಾರಿ ಪಡೆದ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಯೋಗೀಶ್‌ಗೌಡ ಕೊಲೆ‌ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಂತಾಗಿದ್ದು, ಬೆಂಗಳೂರು,‌ ತಮಿಳುನಾಡು ಮೂಲದ ಹಂತಕರು ಪತ್ತೆಯಾಗಿದ್ದಾರೆ. ಅಶ್ವತ್ಥ್,‌ ಪುರುಷೋತ್ತಮ ಸೇರಿ ಐವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಧಾರವಾಡಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ.

Yogesh Gowda murder case
ಯೋಗೀಶಗೌಡ ಹತ್ಯೆ ಪ್ರಕರಣ

By

Published : Mar 1, 2020, 9:28 PM IST

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್‌ಗೌಡ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಿಬಿಐ ಬಲೆಗೆ ನಿಜವಾದ ಆರೋಪಿಗಳು ಬಿದ್ದಿದ್ದಾರೆ.

ಯೋಗೀಶಗೌಡ ಹತ್ಯೆ ಪ್ರಕರಣ: ಸುಫಾರಿ ಪಡೆದ ಆರೋಪಿಗಳ ಹೆಡೆಮುರಿ ಕಟ್ಟಿದ ಸಿಬಿಐ ಅಧಿಕಾರಿಗಳು

ಈ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಂತಾಗಿದ್ದು, ಬೆಂಗಳೂರು,‌ ತಮಿಳುನಾಡು ಮೂಲದ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಸಿಬಿಐ ಅಧಿಕಾರಿಗಳು, ಅಶ್ವತ್ಥ್,‌ ಪುರುಷೋತ್ತಮ ಸೇರಿ ಐವರನ್ನು ವಶಕ್ಕೆ ಪಡೆದು ಧಾರವಾಡಕ್ಕೆ ಕರೆತಂದಿದ್ದಾರೆ.

ಬೆಂಗಳೂರು‌ ಮೂಲದ ಸುಫಾರಿ ಹಂತಕರು ಬಲೆಗೆ ಬಿದ್ದಿದ್ದು, ಯೋಗೀಶಗೌಡ ಹತ್ಯೆ ಪ್ರಕರಣದ ನಂಬರ್ ಒನ್ ಆರೋಪಿ ಬಸವರಾಜ ಮುತ್ತಗಿ ಅವರಿಂದ ಸುಫಾರಿ ಪಡೆದುಕೊಂಡಿದ್ದರಂತೆ. ಸಿನಿಮೀಯ ಮಾದರಿಯಲ್ಲಿ ಸಿಬಿಐ ಅಧಿಕಾರಿಗಳು ಆರೋಪಿಗಳ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನದ ಭೀತಿಯಲ್ಲಿ‌ದ್ದ ಆರೋಪಿಗಳು ತಮಿಳುನಾಡಿಗೆ ಕಾಲ್ಕಿಳುತ್ತಿದ್ದ ವೇಳೆ ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಧೀಶರ ವಸತಿ ಗೃಹಕ್ಕೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದಾರೆ. ಕಾರಿನಲ್ಲಿ ಮೂವರು ಅಧಿಕಾರಿಗಳು ಆಗಮಿಸಿದ್ದು, ಆರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ‌.

ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶೆ ವಿಜಯಲಕ್ಷ್ಮಿ ಘಾಣಾಪುರ ಸೂಚಿಸಿದ್ದಾರೆ.

ABOUT THE AUTHOR

...view details