ಕರ್ನಾಟಕ

karnataka

ETV Bharat / state

Impact: ಸಂಕಷ್ಟದಲ್ಲಿದ್ದ ಮಹಿಳೆಗೆ ಸಹಾಯಹಸ್ತ ಚಾಚಿದ ಯುವಕರ ಬಳಗ - ಈಟಿವಿ ಭಾರತ ವರದಿ ಫಲಶ್ರುತಿ

ಸಾಲ ಮರುಪಾವತಿ ಮಾಡಲಾಗದೆ ಸಂಕಷ್ಟದಲ್ಲಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರ ಬಗ್ಗೆ ಈಟಿವಿ ಭಾರತ ಪ್ರಕಟಿಸಿದ್ದ ವರದಿ ಫಲ ನೀಡಿದೆ. ಈ ವರದಿ ಗಮನಿಸಿದ ಯುವಕರ ಬಳಗವೊಂದು ಮಹಿಳೆಗೆ ನೆರವು ನೀಡಿದೆ.

ETV Bharat impact : youth team helped  woman in Hubli
ಮಹಿಳೆಗೆ ಸಹಾಯ ಹಸ್ತ ಚಾಚಿದ ಮಂಜುನಾಥ ಹೆಬಸೂರು ಗೆಳೆಯರ ಬಳ

By

Published : Jun 17, 2020, 10:23 AM IST

ಹುಬ್ಬಳ್ಳಿ: ದಾರಿ ತಪ್ಪಿದ ಗಂಡನಿಗೆ ಉದ್ಯೋಗ ಮಾಡಲು ಸಾಲ ಕೊಡಿಸಿ, ಮರುಪಾವತಿ ಮಾಡಲಾಗದೆ ಪರದಾಡುತ್ತಿರುವ ಮಹಿಳೆಗೆ ಮಂಜುನಾಥ ಹೆಬಸೂರು ನೇತೃತ್ವದ ಗೆಳೆಯರ ಬಳಗ ಸಹಾಯಹಸ್ತ ಚಾಚಿದೆ.

ಮಂಜುನಾಥ ಹೆಬಸೂರು ಹಾಗೂ ಗೆಳೆಯರು ಮಹಿಳೆಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿ, ತರಕಾರಿ‌ ಹಾಗೂ ಮಕ್ಕಳಿಗೆ ಶಾಲಾ ಬ್ಯಾಗ್ ಕೊಡಿಸುವ ಮೂಲಕ‌ ಮಾನವೀಯತೆ ಮೆರೆದಿದ್ದಾರೆ.‌

ಮಹಿಳೆಗೆ ಸಹಾಯ ಹಸ್ತ ಚಾಚಿದ ಮಂಜುನಾಥ ಹೆಬಸೂರು ಗೆಳೆಯರ ಬಳ

ಗಬ್ಬೂರು ನಿವಾಸಿ ಗಿರಿಜಾ ಹನುಮಂತ ನಾಯ್ಕರ ಅವರು ಕಳೆದ 15 ವರ್ಷಗಳ ಹಿಂದೆ ಕುಂದಗೋಳ‌ ತಾಲೂಕಿನ ಬೆಟದೂರು ಗ್ರಾಮದ ಹನುಮಂತ ಎಂಬಾತನ‌ ಜೊತೆ ವಿವಾಹವಾಗಿದ್ದರು. ದುಶ್ಚಟಗಳ ದಾಸನಾಗಿದ್ದ ಗಂಡನಿಗೆ ಏನಾದರೂ ಉದ್ಯೋಗ ಮಾಡಿಕೊಂಡಿರಲಿ ಎಂದು ಗಿರಿಜಾ ಸಾಲ ತೆಗೆಸಿಕೊಟ್ಟಿದ್ದರು. ಆದ್ರೆ ಪತಿರಾಯ ಪತ್ನಿಯಿಂದ ಹಣ ಪಡೆದು ವ್ಯವಹಾರ ಮಾಡದೆ ಇಬ್ಬರು ಮಕ್ಕಳು ಹಾಗೂ ಪತ್ನಿಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ಇದರಿಂದ ಅತ್ತ ಸಾಲ ತುಂಬಿಸಲಾಗದೆ ಇತ್ತ ಜೀವನಕ್ಕೂ ಬೇರೆ ದಾರಿಯಿಲ್ಲದೆ ಮಹಿಳೆ ಪರದಾಡುತ್ತಿದ್ದರು.

ಈ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಸುದ್ದಿ ವೀಕ್ಷಿಸಿದ ಮಂಜುನಾಥ ಹೆಬಸೂರು ಹಾಗೂ ಗೆಳೆಯರು ಮಹಿಳೆಗೆ ಸಹಾಯ ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ABOUT THE AUTHOR

...view details