ಹುಬ್ಬಳ್ಳಿ:ಬೆಳೆ ವಿಮೆ ವಿಚಾರದಲ್ಲಿ ವಂಚನೆ ಮಾಡಲು ಬಿಡುವುದಿಲ್ಲ. ಈ ರೀತಿ ಮಾಡುವವರಿಗೆ ಈಗಾಗಲೇ ತಾಕೀತು ಮಾಡಿದ್ದೇವೆ. ನಿಗದಿತ ಕಂಪನಿಗಳ ಮೇಲೆ ಆರೋಪ ಕೇಳಿ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಆತ್ಮಹತ್ಯೆ ವಿಚಾರದಲ್ಲಿ ರೈತರು ಸಾಲ ಮಾಡಿದ್ದಕ್ಕೆ ದಾಖಲಾತಿಗಳಿದ್ದರೆ ನೋಟಿಸ್ ಕೊಡಬೇಕು ಎಂದಿಲ್ಲ. ರೈತರ ಖಾತೆಯಲ್ಲಿ ಸಾಲದ ಕುರಿತಾದ ದಾಖಲೆಗಳಿದ್ದರೆ ಸಾಕಾಗುತ್ತದೆ. ನಂತರ ಕಮಿಟಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಪರಿಹಾರ ಕೊಡುವ ಕಾರ್ಯ ಮಾಡುತ್ತದೆ ಎಂದರು.