ಧಾರವಾಡ/ಹುಬ್ಬಳ್ಳಿ: ಉಗ್ರರ ನಿಗ್ರಹಕ್ಕೆ ಎಟಿಎಸ್ ಸ್ಥಾಪನೆ ಮಾಡಲಾಗಿದ್ದು, ಎಟಿಎಸ್ ಗೆ ಸಮರ್ಥ ಹಾಗೂ ಅನುಭವಿ ಅಧಿಕಾರಿಗಳ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಹೇಳಿದರು.
ಎಟಿಎಸ್ಗೆ ಸಮರ್ಥ ನಾಯಕರನ್ನು ನೇಮಕ ಮಾಡ್ತೇವೆ: ಗೃಹ ಸಚಿವ ಬೊಮ್ಮಾಯಿ - ಗೃಹ ಸಚಿವ ಬಸವರಾಜ ಬೊಮ್ಮಾಯಿ
ಉಗ್ರರ ನಿಗ್ರಹ ಮಾಡಲೆಂದು ಎಟಿಎಸ್ ಇಲಾಖೆಯನ್ನು ಈಗಾಗಲೇ ಸ್ಥಾಪನೆ ಮಾಡೆಲಾಗಿದ್ದು, ಮುಂದಿನ ದಿನಗಳಲ್ಲಿ ಸಮರ್ಥ ಹಾಗೂ ಅನುಭವಿ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಎಟಿಎಸ್ ಕಾರ್ಯ ನಿರ್ವಹಿಸುತ್ತಿದೆ. ಎಟಿಎಸ್ ಸದೃಡಗೊಳಿಸಲು ಸೂಕ್ತ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.
ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಎಟಿಎಸ್ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದು, ಬೆಂಗಳೂರು ಜನಸಂಖ್ಯೆ ನೋಡಿಕೊಂಡು ಎಟಿಎಸ್ ಸದೃಡಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ಅದಲ್ಲದೆ ಎಟಿಎಸ್ಗೆ ಸಮರ್ಥವಾದ ಹಾಗೂ ಅನುಭವವುಳ್ಳ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಮತ್ತು ಎಟಿಎಸ್ಗೆ ಬೇಕಾದ ತಂತ್ರಜ್ಞಾನ, ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.