ಕರ್ನಾಟಕ

karnataka

ETV Bharat / state

ಬರದ್ವಾಡ ಗ್ರಾಮಕ್ಕೆ ಭೇಟಿ ಪ್ರಹ್ಲಾದ್​​​ ಜೋಶಿ: ನೆರೆಹಾನಿ ವೀಕ್ಷಣೆ

ಕೇಂದ್ರ ಸಚಿವ ಪ್ರಹ್ಲಾದ್​​​ ಜೋಶಿ ಜಿಲ್ಲೆಯ ಕುಂದಗೋಳ ತಾಲೂಕು ಬರದ್ವಾಡ ಗ್ರಾಮಕ್ಕೆ ಭೇಟಿ ನೀಡಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನ ಪರಿಶೀಲನೆ ನಡೆಸಿದ್ರು.

ಬರದ್ವಾಡ ಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ..

By

Published : Aug 12, 2019, 9:39 PM IST

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್​​​ ಜೋಶಿ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮಕ್ಕೆ ಭೇಟಿ ನೀಡಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನ ಪರಿಶೀಲನೆ ನಡೆಸಿದ್ರು.

ಬರದ್ವಾಡ ಗ್ರಾಮಕ್ಕೆ ಭೇಟಿ ಪ್ರಹ್ಲಾದ್​​​ ಜೋಶಿ: ನೆರೆಹಾನಿ ವೀಕ್ಷಣೆ

ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ಸಂಪರ್ಕ ಕಡಿತ ಹಿನ್ನೆಲೆ ವಾರ್ತಾ ಇಲಾಖೆ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಸ್ಥಳೀಯರು ಹಳ್ಳದ ಪಕ್ಕದ ಗುಂಡಿಗೆ ಕಲ್ಲು ತುಂಬಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಾಲ್ನಡಿಗೆ ಮೂಲಕ ಗ್ರಾಮಕ್ಕೆ ಆಗಮಿಸಿದ್ದು, ಸಚಿವರ ಸಮ್ಮುಖದಲ್ಲೇ ಗ್ರಾಮಸ್ಥರು ಅಸಮಾಧಾನ ಹೊರಹಾಕಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ರು.

ಸೇತುವೆ ನಿರ್ಮಾಣದ ಹಿನ್ನೆಲೆ ಸೇವಾ ರಸ್ತೆ ಮಾಡದ ಗುತ್ತಿಗೆದಾರರ ವಿರುದ್ಧ ಅಸಮಾಧಾನ ಹೊರಹಾಕಿದ ಕೇಂದ್ರ ಸಚಿವ ಜೋಶಿ, ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ರು. ಅಲ್ಲದೇ, ಎಲ್ಲಾ ರಸ್ತೆಗಳನ್ನು ನಿರ್ಮಾಣ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ರು.

ABOUT THE AUTHOR

...view details