ಧಾರವಾಡ:ರಾಜು ಕಾಗೆ ಇತರರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೋರ್ಟ್ ತೀರ್ಪಿಗೂ ಮುಂಚೆ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಮತ್ತೊಮ್ಮೆ ಹೇಳುತ್ತಿದ್ದೇನೆ, ಹೇಳೋದ್ ಹೇಳ್ತಿವಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಅಂತಾ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಅನರ್ಹರ ತೀರ್ಪಿಗೂ ಮುಂಚೆ ರಾಜು ಕಾಗೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ರಾಜು ಕಾಗೆ ಇತರರು ಕಾಂಗ್ರೆಸ್ ಸೇರ್ಪಡೆ ವಿಚಾರ ಕೋರ್ಟ್ ತೀರ್ಪಿಗೂ ಮುಂಚೆ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಮತ್ತೊಮ್ಮೆ ಹೇಳುತ್ತಿದ್ದೇನೆ, ಹೇಳೋದ್ ಹೇಳ್ತಿವಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಅಂತಾ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದ ಗಾಂಧಿನಗರದ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಲಯದ ರಸ್ತೆ ಭೂಮಿ ಪೂಜೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡಕಬೇಡಿ ಅನ್ನೋದು ನಮ್ಮ ಕರ್ತವ್ಯ. ಅವರು ಕೇಳ್ತಾರೋ ಇಲ್ವೋ ಗೊತ್ತಿಲ್ಲ, ಅನರ್ಹರ ಮೇಲೆ ಯಾರೂ ಬಹಿರಂಗವಾಗಿ ಪ್ರೀತಿ ತೋರಿಸಿಲ್ಲ ,ಯಾರಿಗೇನ್ ಪ್ರೀತಿ ಆಗಿದೆ, ಯಾರಿಗೆ ಆಗಿಲ್ಲ ಗೊತ್ತಿಲ್ಲ, ಎಲ್ಲ ಕ್ಷೇತ್ರಕ್ಕೆ ಕೊಡೊವಷ್ಟು ಅನುದಾನ ಕೊಟ್ಟಿದ್ದಾರೆ ಎಂದರು.
ನಂತರ ಉಪಚುನಾವಣೆಯಲ್ಲಿ ಪ್ರಚಾರದ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಸ್ಥಳೀಯ ಮಟ್ಟದಲ್ಲಿ ಯಡಿಯೂರಪ್ಪನವ್ರೆ ಸ್ಟಾರ್ ಪ್ರಚಾರಕರು ಎಂದರು. ಮಹಾರಾಷ್ಟ್ರದ ಸರ್ಕಾರ ರಚನೆ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್-ಶಿವಸೇನ ಮೈತ್ರಿಯಾದರೆ ಅದು ದೊಡ್ಡ ದುರಂತ.ಜನ ಶಿವಸೇನೆ ಮತ್ತು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಶಿವಸೇನೆ ಬೇರೆಯವರ ಜೊತೆ ಮೈತ್ರಿ ಮಾಡಿಕೊಂಡ್ರೆ ಜನರ ತೀರ್ಪಿಗೆ ಬಗೆದ ದ್ರೋಹ ಆಗುತ್ತೆ ಎಂದು ಶಿವಸೇನೆ ವಿರುದ್ದ ಹರಿಹಾಯ್ದರು.