ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಧಾರಕಾರ ಮಳೆ:ಸಿಡಿಲು ಬಡಿದು ಎರಡು ಎಮ್ಮೆ ಸಾವು - ಶಿವಮೊಗ್ಗದಲ್ಲಿ ಭಾರಿ ಮಳೆ

ಧಾರವಾಡದಲ್ಲಿ ಭಾರಿ ಮಳೆಯಾಗುತ್ತಿದೆ. ಸಿಡಿಲು ( thunderbolt) ಬಡಿದು ಎರಡು ಎಮ್ಮೆಗಳು( buffaloes death) ಸಾವನ್ನಪ್ಪಿವೆ..

two buffaloes dies due to thunderbolt
ಸಿಡಿಲು ಬಡಿದು ಎಮ್ಮೆ ಸಾವು

By

Published : Nov 16, 2021, 10:45 PM IST

ಧಾರವಾಡ: ಧಾರಾಕಾರವಾಗಿ ಮಳೆ ಸುರಿದ(rain in Dharwad) ಹಿನ್ನೆಲೆ ಸಿಡಿಲು ಬಡಿದು ಎರಡು ಎಮ್ಮೆ ಮೃತಪಟ್ಟ ಘಟನೆ(buffaloes death) ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಂಗಾರಾಮ ವಿಠ್ಠಲ ಕೊಳ್ಳಾಪಟ್ಟಿ ಎಂಬಾತರಿಗೆ ಸೇರಿದ ಎರಡು ಎಮ್ಮೆಗಳ ಬೆಲೆ ಒಂದು ಲಕ್ಷಕ್ಕೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ. ಗಂಗಾರಾಮ ಕೋಳಾಪಟ್ಟಿ ಎಂಬುವರಿಗೆ ಸೇರಿದ ಎಮ್ಮೆಗಳು ಕೊಟ್ಟಿಗೆಯಲ್ಲಿದ್ದಾಗ ಸಿಡಿಲು ಬಡಿದು ಅಸುನೀಗಿವೆ.

ಸಿಡಿಲು ಬಡಿದು ಎಮ್ಮೆ ಸಾವು

ಅಳ್ನಾವರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎಮ್ಮೆಗಳನ್ನು ಕಳೆದುಕೊಂಡ ಕುಟುಂಬದ ಸದಸ್ಯರ ಆಕ್ರಂದನ ಹೇಳತೀರದ್ದಾಗಿದೆ. ಏಕಾಏಕಿ ಗುಡುಗು ಸಹಿತ ಮಳೆಯಾಗಿ ಸಿಡಿಲು ಬಡಿದು ಎಮ್ಮೆಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಎರಡು ಎಮ್ಮೆಗಳ ನಿಧನಕ್ಕೆ ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಆಗ್ರಹ ಕೇಳಿ ಬಂದಿದೆ.

ಕೊಟ್ಟಿಗೆ ಬಿದ್ದು ಜಾನುವಾರು ಸಾವು, ಮನೆಗೆ ನೀರು ನುಗ್ಗಿ ಅವಾಂತರ :ಶಿವಮೊಗ್ಗ ಜಿಲ್ಲೆಯಲ್ಲಿ‌‌ ಸಂಜೆ ಗುಡುಗು- ಸಿಡಿಲು ಸಹಿತ ಮಳೆ ಬಂದು‌ ಭಾರಿ ಅವಾಂತರ ಸೃಷ್ಟಿಸಿದೆ. ಸಂಜೆ 4 ಗಂಟೆಗೆ ಕತ್ತಲೆ ಆವರಿಸಿದಂತಾಗಿತ್ತು. ನಂತರ ಬಂದ ಗುಡುಗು- ಸಿಡಿಲು, ಮಳೆಯಿಂದಾಗಿ ಶಿವಮೊಗ್ಗ ತಾಲೂಕು ದೇವಬಾಳು ಗ್ರಾಮದಲ್ಲಿ ರಮೇಶ್ ಎಂಬುವರ ಕೊಟ್ಟಿಗೆ ಕುಸಿತವಾಗಿದೆ.

ಇದರಿಂದ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಇನ್ನು ಮಳೆಯಿಂದ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಯ ನೀರು ಹೊರಗೆ ಹಾಕಲು ಜನ ಹರಸಾಹಸ ಪಡುತ್ತಿದ್ದಾರೆ.

ಕೊಟ್ಟಿಗೆ ಕುಸಿದು ಎಮ್ಮೆ ಸಾವು

ABOUT THE AUTHOR

...view details