ಹುಬ್ಬಳ್ಳಿ: ಜಮೀನಿನ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವಿಗೀಡಾದ ಘಟನೆ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಎಂಬುವರ ಜಮೀನಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹುಬ್ಬಳ್ಳಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು - ಬ್ಯಾಹಟ್ಟಿ ಗ್ರಾಮ
ಕೃಷಿ ಹೊಂಡಕ್ಕೆ ಮಕ್ಕಳು ಬಿದ್ದು ಸಾವಿಗೀಡಾದ ದಾರುಣ ಘಟನೆ ಬ್ಯಾಹಟ್ಟಿ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಎಂಬುವರ ಜಮೀನಿನಲ್ಲಿ ನಡೆದಿದೆ.
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು!
ಚಂದ್ರು ಮರಿಬಸನಗೌಡರ (7) ಹಾಗೂ ಗೌತಮ ಮರಿಬಸನಗೌಡರ(10) ಮೃತರು. ಗ್ರಾಮದ ಮರಿ ಬಸನಗೌಡರ ಅವರು ಈ ಇಬ್ಬರು ಮಕ್ಕಳನ್ನು ತಮ್ಮ ಜಮೀನಿಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಮಕ್ಕಳು ನೀರಲ್ಲಿ ಆಟ ಆಡುವ ಉದ್ದೇಶದಿಂದ ಪಕ್ಕದ ಜಮೀನಿನಲ್ಲಿ ಇದ್ದ ಹೊಂಡಕ್ಕೆ ಇಳಿದಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಕ್ಕಳ ಸಾವಿನಿಂದ ಕಂಗೆಟ್ಟಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Last Updated : Nov 7, 2021, 9:43 AM IST