ಹುಬ್ಬಳ್ಳಿ:ಕಳೆದ ಎರಡು ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ. ಟಿಪ್ಪರೊಂದು ತುಂಬಿ ಹರಿಯುವ ಹಳ್ಳದಲ್ಲಿ ಸಿಲುಕಿಕೊಂಡಿರುವ ಘಟನೆ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡ ಟಿಪ್ಪರ್: ಹೊರ ತೆಗೆಯಲು ಹರಸಾಹಸ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್
ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಣ್ಣೆ ಹಳ್ಳ ತುಂಬಿದ್ದು, ಹಳ್ಳ ದಾಟಿಸುವಾಗ ಟಿಪ್ಪರ್ ಸಿಲುಕಿಕೊಂಡಿದೆ.
ಬೆಣ್ಣೆ ಹಳ್ಳದಲ್ಲಿ ಸಿಲುಕಿಕೊಂಡ ಟಿಪ್ಪರ್
ಬೆಣ್ಣೆ ಹಳ್ಳ ದಾಟಿಸಲು ಟಿಪ್ಪರ್ ಚಾಲಕನ ಪರದಾಟ ನಡೆಸಿದ್ದು, ನಿರಂತರ ಮಳೆಯಿಂದ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು, ಟಿಪ್ಪರ್ ಸೇತುವೆ ಮೇಲೆ ಸಿಲುಕಿಕೊಂಡಿದೆ. ಗ್ರಾಮಸ್ಥರು ಕೂಡ ಸಹಾಯಕ್ಕೆ ಬಂದಿದ್ದು, ಟಿಪ್ಪರ್ ಹೊರ ತೆಗೆಯಲು ಸಾಕಷ್ಟು ಹರಸಾಹಸ ನಡೆಸುತ್ತಿದ್ದಾರೆ.