ಹುಬ್ಬಳ್ಳಿ:ಸಚಿವಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಒಗ್ಗಟ್ಟಾಗಿ ಕುಂದಗೋಳ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೇವೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವಿವಾದಕ್ಕೆ ತೆರೆ ಎಳೆಯುವ ಯತ್ನ ಮಾಡಿದ್ದಾರೆ.
ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಸಚಿವ ಡಿ ಕೆ ಶಿವಕುಮಾರ್ ನನ್ನ ಬಗ್ಗೆ ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಗಮನಕ್ಕೆ ಬಂದಿದೆ. ನನಗೆ ಆ ಪ್ರಶ್ನೆ ಕೇಳಿದ್ರೇ ನಾನು ಸಹ ಅದನ್ನೇ ಹೇಳುತ್ತಿದ್ದೆ. ಆದರೆ, ಈಗ ಅದು ಮುಗಿದ ಅಧ್ಯಾಯ ಎಂದು ಸಚಿವ ಸತೀಶ್ ಜಾರಕಿಹೊಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಸಂಶಿಯಲ್ಲಿ ಮೈತ್ರಿಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿಯವರ ಪರವಾಗಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ನಾವು ಈಗಾಗಲೇ ಎಲ್ಲವನ್ನೂ ಮರೆತು ಕುಂದಗೋಳ ಚುನಾವಣೆಯ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಉತ್ತರಕರ್ನಾಟಕ, ದಕ್ಷಿಣ ಕರ್ನಾಟದವರು ಎಂಬ ವ್ಯತ್ಯಾಸವಿಲ್ಲ. ಅವರ ಸಾಮರ್ಥ್ಯದ ಮೇಲೆ ಜವಾಬ್ಧಾರಿ ನೀಡಲಾಗಿದೆ. ಇಲ್ಲಿ ಭಿನ್ನಾಭಿಪ್ರಾಯದ ಪ್ರಶ್ನೆಯೇ ಬರುವುದಿಲ್ಲ ಎಂದರು.
ಡಿ ಕೆ ಶಿವಕುಮಾರ್ ನನ್ನ ಬಗ್ಗೆ ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಗಮನಕ್ಕೆ ಬಂದಿದೆ. ನನಗೆ ಆ ಪ್ರಶ್ನೆ ಕೇಳಿದ್ರೇ ನಾನೂ ಸಹ ಅದನ್ನೇ ಹೇಳುತ್ತಿದ್ದೆ. ಆದರೆ, ಈಗ ಅದು ಮುಗಿದ ಅಧ್ಯಾಯ. ಡಿ ಕೆ ಶಿವಕುಮಾರ್ ಜೊತೆಗೆ ಜಂಟಿ ಪ್ರಚಾರ ಕಾರ್ಯಕ್ಕೆ ಹಿಂದೇಟು ವಿಚಾರಕ್ಕೆ ಸಂಬಂಧ ಮಾತನಾಡಿದ ಅವರು, ಯಾಕೆ ಆ ಪ್ರಶ್ನೆ ಕೇಳುತ್ತೀರಿ. ನೀವೇ ಈ ಬಗ್ಗೆ ಸ್ಪಷ್ಟಪಡಿಸಿ ಎಂದು ಮಾಧ್ಯಮವರಿಗೆ ಪ್ರಶ್ನೆ ಹಾಕಿದರು.