ಕರ್ನಾಟಕ

karnataka

ETV Bharat / state

ಧಾರವಾಡ ಕಟ್ಟಡ ದುರಂತ... ಘಟನೆ ನೆನೆದು ಕಣ್ಣೀರಿಟ್ಟ ಡಿಸಿ

ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದ ಎಲ್ಲಾ ರಕ್ಷಣಾ ಸಿಬ್ಬಂದಿಗೆ ಮತ್ತು ಧಾರವಾಡದ ಜನತೆ ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್.

ರಕ್ಷಣಾ ಸಿಬ್ಬಂದಿಗೆ ಮತ್ತು ಧಾರವಾಡದ ಜನತೆ ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್

By

Published : Mar 25, 2019, 9:25 PM IST

ಧಾರವಾಡ: ಬಹುಮಹಡಿ ಕಟ್ಟಡದ ದುರಂತದಲ್ಲಿ ಮೃತ ಪಟ್ಟವರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ. 57 ಜನರನ್ನು ರಕ್ಷಣೆ ಮಾಡಲಾಗಿದೆ. ಏಳನೆ ದಿನವಾದ ಇಂದು ಕಾರ್ಯಾಚರಣೆ ಮುಕ್ತಾಯಗೊಂಡಿದ್ದು. ಜಿಲ್ಲಾಧಿಕಾರಿ ದೀಪಾ ಚೋಳನ್ ಘಟನೆಯನ್ನು ನೆನೆದು ಕಣ್ಣಿರು ಹಾಕಿದ್ದಾರೆ. ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದ ಎಲ್ಲಾ ರಕ್ಷಣಾ ಸಿಬ್ಬಂದಿಗೆ ಮತ್ತು ಧಾರವಾಡದ ಜನತೆ ಕೃತಜ್ಞತೆ ತಿಳಿಸಿದ್ದಾರೆ.

ಕಳೆದ ಮಂಗಳವಾರ ಬಹುಮಹಡಿ ಕಟ್ಟಡ ಕುಸಿದ ಹಿನ್ನಲೆ ರಕ್ಷಣಾ ಕಾರ್ಯ ನೆಡೆಸಿದ ಅಗ್ನಿಶಾಮಕ ದಳಕ್ಕೆ ಎನ್.ಡಿ ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಜೊತೆಯಾಗಿ 57 ಜನರನ್ನ ಸಾವಿನ ದವಡೆಯಿಂದ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 19 ಜನರು ಸಾವಿಗಿಡಾಗಿದ್ದಾರೆ. ಅಂದು ನಡೆದ ಆ ಘನಘೋರ ದುರಂತವನ್ನು ನೆನೆದು ಜಿಲ್ಲಾಧಿಕಾರಿ ದೀಪಾ ಚೋಳನ್ ಒಂದು ಕ್ಷಣ ಭಾವುಕರಾಗಿ ಕಣ್ಣಿರು ಹಾಕಿದ್ದಾರೆ.

ರಕ್ಷಣಾ ಸಿಬ್ಬಂದಿಗೆ ಮತ್ತು ಧಾರವಾಡದ ಜನತೆ ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್

ಇನ್ನು ಸಮಯಕ್ಕೆ ಸರಿಯಾಗಿ ರಕ್ಷಣಾ ಕಾರ್ಯಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿ ಮತ್ತು ಎನ್.ಡಿ ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಸಿಬ್ಬಂದಿ ಸೇರಿದಂತೆ ಪೋಲಿಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ದನ್ಯವಾದಗಳನ್ನು ತಿಳಿಸಿದ್ದು. ಎಲ್ಲಾ ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಶ್ಲಾಘನೆ ವ್ಯಕ್ತಪಡಿಸಿದರು. ನಾವು ಕಟ್ಟಡದ ಪ್ರತಿ ಹಂತದಲ್ಲಿಯೂ ಹುಡುಕಾಟ ನಡೆಸಿ ಮಿಸ್ಸಿಂಗ್ ಅಂತ ಬಂದ ದೂರಿನ ಮೇಲೆ ಎಲ್ಲರನ್ನೂ ಪತ್ತೆ ಮಾಡುವ ಮೂಲಕ ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ರಕ್ಷಣಾ ಕಾರ್ಯ ಮುಗಿದ ನಂತರ ಮಾದ್ಯಮಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಪಡೆಯ ಮುಖ್ಯಸ್ಥರು. ಧಾರವಾಡದಲ್ಲಿ ಇಷ್ಟೊಂದು ದೊಡ್ಡ ಘನಘೋರ ದುರಂತ ನಡೆದಿದೆ ಎಂದು ಮಾಹಿತಿ ಬಂತು ತಕ್ಷಣ ನಾವು ಕೂಡಾ ಸಂಜೆ ಹೊತ್ತಿಗೆ ಇಲ್ಲಿಗೆ ಆಗಮಿಸಿದಾಗ, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಡೆಸಿದ್ದರು ಅವರ ಜೊತೆಗೆ ಸ್ಥಳೀಯರು ಕೂಡಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ನಾವು ಕೂಡಾ ಅವರೊಂದಿಗೆ ಸೇರಿ ರಕ್ಷಣಾ ಕಾರ್ಯ ಮುಂದುವರೆಸಿದ್ದೆವು, ಕೊನೆಯ ಹಂತದ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟಾಗಿ 57 ಜನರನ್ನು ಬದುಕಿ ಬಂದಿದ್ದು 19 ಜನ ಮೃತರಾಗಿದ್ದಾರೆ ಎಂದರು.

ಸಿಲುಕಿದ್ದವರ ರಕ್ಷಣೆಗೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು, ಅಗ್ನಿಶಾಮಕ ದಳ, ಎಸ್ ಡಿ ಆರ್ ಎಪ್ ಮತ್ತು ಎನ್ ಡಿ ಆರ್ ಎಪ್ ಸೇರಿದಂತೆ ಸ್ಥಳೀಯ ಪೊಲೀಸರನ್ನು ಸಹ ರಕ್ಷಣೆಗೆ ನಿಯೋಜನೆ ಮಾಡಿದ್ದರು.ಇನ್ನು ಧಾರವಾಡದ ಜನತೆ ಎಲ್ಲಾ ರಕ್ಷಣಾ ಸಿಬ್ಬಂಧಿಗಳಿಗೆ ಉತ್ತಮವಾದ ಸೇವೆ ಮತ್ತು ಸಹಕಾರವನ್ನು ನೀಡಿದರು ಎಂದು ಧಾರವಾಡದ ಜನತೆಗೆ ದನ್ಯವಾದಗಳನ್ನು ತಿಳಿಸಿದ್ದಾರೆ.

ABOUT THE AUTHOR

...view details