ಹುಬ್ಬಳ್ಳಿ:ಸ್ಟೋನ್ ಜಿಂಕ್ನ ನೂತನ ಶಾಖೆಯು ನಗರದ ಬೈರಿದೇವರಕೊಪ್ಪದ ಎಪಿಎಂಸಿ, ಭಾರತ ಪೆಟ್ರೋಲ್ ಬೈಕ್ ಹತ್ತಿರ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಜ. 30 ರಂದು ನಡೆಯಲಿದೆ ಎಂದು ಅಶೋಕ್ ಬಡಿಗೇರ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಜ.30ರಂದು ಸ್ಟೋನ್ ಜಿಂಕ್ ನೂತನ ಶಾಖೆ ಲೋಕಾರ್ಪಣೆ - ಹುಬ್ಬಳ್ಳಿ ಲೆಟೆಸ್ಟ್ ನ್ಯೂಸ್
ನಗರದಲ್ಲಿ ನೂತನವಾಗಿ ಸ್ಟೋನ್ ಜಿಂಕ್ನ ನೂತನ ಶಾಖೆ ಆರಂಭವಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಜ. 30 ರಂದು ನಡೆಯಲಿದೆ ಎಂದು ಅಶೋಕ್ ಬಡಿಗೇರ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಿನೂತನ ರೀತಿಯಲ್ಲಿ ಶೋರೋಮ್ ಪ್ರಾರಂಭಗೊಳ್ಳುತ್ತಿದ್ದು, ಮನೆಯ ಕನಸನ್ನು ಸಾಕಾರಗೊಳಿಸುವಲ್ಲಿ ವಿನೂತನ ಶೈಲಿಯ ನ್ಯಾಚುರಲ್ ಸ್ಟೋನ್ ವರ್ಕ್ ಮೂಲಕ ಸ್ಟೋನ್ ಜಿಂಕ್ ಪ್ರಾರಂಭಗೊಳ್ಳಲಿದೆ. ಇಲ್ಲಿ ಮಾರ್ಬಲ್, ಗ್ರಾನೈಟ್, ಲೈಮ್ ಸ್ಟೋನ್, ಸ್ಲೇಟ್ ಸೇರಿದಂತೆ ಇತರ ಕಲ್ಲುಗಳು ಸಾರ್ವಜನಿಕರ ಕೈಗೆಟುಕುವ ದರದಲ್ಲಿ ದೊರೆಯಲಿದ್ದು, 60ಕ್ಕೂ ಹೆಚ್ಚು ಮಾದರಿಯ ಉತ್ಪನ್ನಗಳು ದೊರೆಯಲಿವೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ವಿಆರ್ಎಲ್ ಸಂಸ್ಥೆಯ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಕರ್ನಾಟಕ ಬ್ಯಾಂಕ್ ರಿಜಿನಲ್ ಕಚೇರಿಯ ಹೆಡ್ ನಾಗರಾಜ್ ಐತಾಲ್ ಆಗಮಿಸಲಿದ್ದಾರೆ ಎಂದರು.
ಈ ವೇಳೆ ವಿಜಯಮಟ್ಟಿ, ಕಿರಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.