ಕರ್ನಾಟಕ

karnataka

ETV Bharat / state

ರೈತರ ಹೊಲಗಳಿಗೆ ಕಳ್ಳರ ಕಾಟ: ಹೊಲದಲ್ಲಿನ ಸ್ಪ್ರಿಂಕ್ಲರ್​​ ಹಾಗೂ ತಾಮ್ರದ ತಂತಿ ಕಳ್ಳತನ - Dharwad theft in the yard News

ಈ ಹಿಂದೆ ಕೂಡಾ ಈ ಗ್ರಾಮಗಳ ಸರಹದ್ದಿನಲ್ಲಿರುವ ಮಹಾಮನೆ ಮಠದ ಹೊಲಗಳಿಗೆ ಕನ್ನ ಹಾಕಿದ್ದ ಕಳ್ಳರು, ಅಲ್ಲಿ ಕೂಡ ಇದೇ ರೀತಿಯಾಗಿ ಬೋರ್​ವೆಲ್​ಗಳ ತಾಮ್ರದ ತಂತಿಯನ್ನ ಕಳ್ಳತನ ಮಾಡಿದ್ದರು. ಈಗ ಎರಡನೇ ಬಾರಿ ನಡೆದ ಕಳ್ಳತನವಾಗಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರ ಹೊಲಗಳಿಗೆ ಕಳ್ಳರ ಕಾಟ
ರೈತರ ಹೊಲಗಳಿಗೆ ಕಳ್ಳರ ಕಾಟ

By

Published : Jul 16, 2020, 3:39 PM IST

ಧಾರವಾಡ: ಕೊರೊನಾದಿಂದ ಕಂಗೆಟ್ಟ ರೈತರಿಗೀಗ ಕಳ್ಳರ ಭಯ ಶುರುವಾಗಿದೆ. ತಾಲೂಕಿನ ಮನಗುಂಡಿ ಹಾಗೂ ನಾಯಕನ ಹುಲಿಕೊಪ್ಪ ಗ್ರಾಮದ ರೈತರ ಹೊಲದಲ್ಲಿನ ಸ್ಪ್ರಿಂಕ್ಲರ್​​ ಹಾಗೂ ತಾಮ್ರದ ತಂತಿ ಕಳ್ಳತನವಾಗುತ್ತಿವೆ.

ಈ ಗ್ರಾಮಗಳ ಸುತ್ತಮುತ್ತ ಇರುವ ಹೊಲಗಳಲ್ಲಿರುವ ನೀರು ಚಿಮ್ಮುವ ಸ್ಪ್ರಿಂಕ್ಲರ್​​ ಹಾಗೂ ತಾಮ್ರದ ತಂತಿಯನ್ನ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಬೋರ್​ವೆಲ್​ಗೆ ಅಳವಡಿಸಿರುವ ತಾಮ್ರದ ಕೇಬಲ್ ಸುಟ್ಟಿರುವ ಕಳ್ಳರು, ಸುಮಾರು ಒಂದು ಲಕ್ಷ ರೂ. ಮೌಲ್ಯದ ತಾಮ್ರ ಕಳ್ಳತನ ಮಾಡಿದ್ದಾರೆ. ಅಲ್ಲದೆ 50 ಸಾವಿರ ರೂ. ಮೌಲ್ಯದ ಸ್ಪ್ರಿಂಕ್ಲರ್​​ಗಳನ್ನ ಕಳ್ಳತನ ಮಾಡಲಾಗಿದೆ.

ರೈತರ ಹೊಲಗಳಿಗೆ ಕಳ್ಳರ ಕಾಟ

ಈ ಹಿಂದೆ ಕೂಡಾ ಈ ಗ್ರಾಮಗಳ ಸರಹದ್ದಿನಲ್ಲಿರುವ ಮಹಾಮನೆ ಮಠದ ಹೊಲಗಳಿಗೆ ಕನ್ನ ಹಾಕಿದ್ದ ಕಳ್ಳರು, ಅಲ್ಲಿ ಕೂಡ ಇದೇ ರೀತಿಯಾಗಿ ಬೋರ್​ವೆಲ್​ಗಳ ತಾಮ್ರದ ತಂತಿಯನ್ನ ಕಳ್ಳತನ ಮಾಡಿದ್ದರು. ಈಗ ಎರಡನೇ ಬಾರಿ ನಡೆದ ಕಳ್ಳತನವಾಗಿದೆ. ಸದ್ಯ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details