ಹುಬ್ಬಳ್ಳಿ/ಧಾರವಾಡ:ಇಂದಿನಿಂದ 3.0 ಅನ್ಲಾಕ್ ಜಾರಿ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳು ತೆರೆಯಲು ಅವಕಾಶ ನೀಡಲಾಗಿದೆ. ಇದೀಗ ಹುಬ್ಬಳ್ಳಿಯ ಪ್ರಸಿದ್ಧ ಶ್ರೀಸಿದ್ದಾರೂಢರ ಮಠ ಮತ್ತು ಧಾರವಾಡದ ಸೋಮೇಶ್ವರ ದೇಗುಲ ಇಂದಿನಿಂದ ಭಕ್ತರಿಗೆ ಮುಕ್ತವಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಸಿದ್ದಾರೂಢರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಎರಡೂವರೆ ತಿಂಗಳಿನಿಂದ ಮಠ ಬಂದ್ ಆಗಿತ್ತು. ಸಿದ್ದಾರೂಢ ಮಠಕ್ಕೆ ಉತ್ತರ ಕರ್ನಾಟಕ ಭಾಗವಲ್ಲದೇ ರಾಜ್ಯ ಹಾಗೂ ಅನ್ಯರಾಜ್ಯದ ಭಕ್ತರು ಆಗಮಿಸುತ್ತಾರೆ.
ಸಿದ್ದಾರೂಢರ ಮಠ, ಸೋಮೇಶ್ವರ ದೇವಸ್ಥಾನ ಓಪನ್ ಸೋಮವಾರವೇ ದೇವಸ್ಥಾನದ ಬಾಗಿಲು ತೆರದ ಹಿನ್ನೆಲೆಯಲ್ಲಿ ಧಾರವಾಡದ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾಕಾರ್ಯ ಭರದಿಂದ ಸಾಗಿತ್ತು. ಇಂದಿನಿಂದ ಭಕ್ತರಿಗೆ ದೇವಸ್ಥಾನದಲ್ಲಿ ದರ್ಶನ ಭಾಗ್ಯ ದೊರೆಯುವುದರಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದ್ದು, ದೇವಸ್ಥಾನಕ್ಕೆ ಸ್ಯಾನಿಟೈಸಿಂಗ್ ಕೂಡಾ ಮಾಡಲಾಗಿದೆ. ಆಡಳಿತ ಮಂಡಳಿ ಸಹಿತ ಎಲ್ಲಾ ನಿಯಮಗಳನ್ನು ಪಾಲಿಸಲು ಮುಂದಾಗಿದೆ. ಧಾರವಾಡದ ಬಹುತೇಕ ದೇವಸ್ಥಾನಗಳಲ್ಲಿ ಸ್ವಚ್ಛತಾ ಕೆಲಸ ನಡೆದಿದೆ.