ಧಾರವಾಡ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಿನ್ನೆ ನವಲಗುಂದ ತಾಲೂಕಿನ ಶಿರಕೋಳದತುಪ್ಪರಿಹಳ್ಳದಲ್ಲಿ ಸಿಲುಕಿದ್ದ ಬಸವಣ್ಣೆಪ್ಪ ಶಂಕ್ರಪ್ಪ ಹೆಬಸೂರ ಅವರನ್ನು ರಕ್ಷಿಸಲು ನಾಲ್ಕು ಜನ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಎಸಿ ಹಾಗೂ ಓರ್ವ ಪಿಎಸ್ಐ ತೆರಳಿದ್ದರು.
ವ್ಯಕ್ತಿಯ ರಕ್ಷಿಸಲು ಹೋಗಿ ತಾವೇ ಸಿಲುಕಿ ರಾತ್ರಿಯಿಡೀ ನಡುಗಡ್ಡೆಯಲ್ಲಿ ಕಾಲ ಕಳೆದ ಅಧಿಕಾರಿಗಳು! - District Collector Deepa Cholan
ಬೆಳಗಿನ ಜಾವ 6 ಗಂಟೆಗೆ ಬಾಗಲಕೋಟೆಯಿಂದ ಬಂದ ಮತ್ತೊಂದು ಬೋಟ್ನಲ್ಲಿ ಎಲ್ಲಾ 7 ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು.
ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪಿಎಸ್ಐ ಜಯಪಾಲ ಅವರಿದ್ದ ಬೋಟ್ನ ಇಂಜಿನ್ ಕಲ್ಲಿಗೆ ಸಿಲುಕಿದ್ದರಿಂದ ರಾತ್ರಿಯಿಡೀ ಹಳ್ಳದ ಪ್ರವಾಹದ ಮಧ್ಯೆ ನಡುಗಡ್ಡೆಯೊಂದರಲ್ಲಿ ಕಾಲ ಕಳೆಯಬೇಕಾಯಿತು. ಬೆಳಗಿನ ಜಾವ ಮೂರು ಗಂಟೆಗೆ ಮುಳುಗು ತಜ್ಞರು ಅವರನ್ನು ತಲುಪಲು ಯತ್ನಿಸಿದರಾದರೂ ಎಸಿ ಹಾಗೂ ಪಿಎಸ್ಐ ಅವರು ಮುಳುಗು ತಜ್ಞರಿಗೆ ಆ ಸಮಯದಲ್ಲಿ ಬರುವುದು ಬೇಡ ಎಂದು ಸೂಚನೆ ನೀಡಿದ್ದರಿಂದ ಅವರು ವಾಪಸು ಬಂದರು.
ಇಂದು ಬೆಳಗಿನ ಜಾವ 6 ಗಂಟೆಗೆ ಬಾಗಲಕೋಟೆಯಿಂದ ಬಂದ ಮತ್ತೊಂದು ಬೋಟ್ನಲ್ಲಿ ಎಲ್ಲಾ 7 ಜನರನ್ನು ಹನಸಿ ಗ್ರಾಮದ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು. ಜಿಲ್ಲಾಧಿಕಾರಿ ದೀಪಾ ಚೋಳನ್, ಎಸ್ಪಿ ಸಂಗೀತ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ತಹಶೀಲ್ದಾರ್ ನವೀನ ಹುಲ್ಲೂರ ಸೇರಿದಂತೆ ಅನೇಕರು ರಾತ್ರಿಯಿಡೀ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.