ಧಾರವಾಡ: ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆದ ಎರಡು ದಿನಗಳ ನಂತರ ಸಾವಿನ ಕುರಿತು ಕುಟುಂಬ ತಿಳಿಸಿ ಎಡವಟ್ಟು ಮಾಡಿದ್ದ ಆರೋಗ್ಯ ಇಲಾಖೆ, ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಮತ್ತೊಂದು ಎಡವಟ್ಟು: ಸೋಂಕಿತ ಮೃತಪಟ್ಟ 9 ದಿನಗಳ ನಂತರ ಮನೆ ಸೀಲ್ಡೌನ್ - Dharwad District News
ಧಾರವಾಡ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಜುಲೈ 24ರಂದು ವೈರಸ್ನಿಂದ ಮೃತಪಟ್ಟಿದ್ದು, 9 ದಿನಗಳ ನಂತರ ಆತನ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ.
ಸೀಲ್ಡೌನ್ ಮಾಡಿರುವುದು
ಧಾರವಾಡ ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ನಿವಾಸಿಯೊಬ್ಬರು ಜುಲೈ 24ರಂದು ವೈರಸ್ನಿಂದ ಮೃತಪಟ್ಟರು. ಅಂತ್ಯ ಸಂಸ್ಕಾರ ಮಾಡಿದ ಎರಡು ದಿನಗಳ ನಂತರ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಆತನ ಕುಟುಂಬ ಸದಸ್ಯರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದರು.
ಅಲ್ಲದೇ, ಈಗ 9 ದಿನಗಳ ಬಳಿಕ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮನೆಯನ್ನು ಸೀಲ್ಡೌನ್ ಮಾಡುವ ಮೂಲಕ ಮಹಾ ಎಡವಟ್ಟನ್ನು ಆರೋಗ್ಯ ಇಲಾಖೆ ತನ್ನ ಖಾತೆಗೆ ಹಾಕಿಕೊಂಡಿದೆ. ಆ ಮನೆಗೆ ಬೆಳಗ್ಗೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ.