ಕರ್ನಾಟಕ

karnataka

ETV Bharat / state

ಸೈಕಲ್ ಜಾಥಾದ ಮೂಲಕ ಮತದಾನ ಜಾಗೃತಿ ಮೂಡಿಸಿದ ಶಾಲಾ ಶಿಕ್ಷಕರು - voting awareness

ಲೋಕಸಭಾ ಚುನಾವಣೆ ಅಂಗವಾಗಿ ಇಂದು ಸ್ವೀಪ್ ಕಾರ್ಯಕ್ರಮದಡಿ ಪ್ರಾಥಮಿಕ ಶಾಲಾ ಶಿಕ್ಷಕರು ಸೈಕಲ್ ಜಾಥಾ ನಡೆಸಿದರು.

ಸೈಕಲ್ ಜಾಥಾ

By

Published : Mar 17, 2019, 12:40 PM IST

ಧಾರವಾಡ : ಲೋಕಸಭಾ ಚುನಾವಣೆ ಅಂಗವಾಗಿ ಇಂದು ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಕರ್ನಾಟಕ ಕಾಲೇಜು ಆಟದ ಮೈದಾನದಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಸೈಕಲ್ ಜಾಥಾ ನಡೆಸಿದರು.

ಮತದಾನ ಜಾಗೃತಿಗೆ ಪಣ ತೊಟ್ಟಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಸೈಕಲ್ ಜಾಥಾ ಕೈಗೊಂಡಿದ್ದು, ಇದಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್​ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪಂ. ಸಿಇಒ ಸತೀಶ್​ ಚಾಲನೆ ನೀಡಿದರು. ಮತದಾನದ ಕುರಿತ ಹಾಡುಗಳನ್ನು ಹಾಡುವ ಮೂಲಕ ಜಾಗೃತಿ ಮೂಡಿಸಿದರು.

ಸೈಕಲ್ ಜಾಥಾ

ನಗರದ ಕೆಸಿಡಿಯಿಂದ ಪ್ರಾರಂಭವಾದ ಸೈಕಲ್ ಜಾಥಾ ಎಲ್ಐಸಿ ರಸ್ತೆ, ಜುಬಲಿ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ‌ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸುಮಾರು 400 ಜನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸೈಕಲ್ ಜಾಥಾ ನಡೆಸಿ, ಮತದಾರರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಲು ಪ್ರೇರಣೆ ನೀಡಿದರು.

ABOUT THE AUTHOR

...view details