ಧಾರವಾಡ :ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 36 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಎಂದಿನಂತೆ ಮಂಗಳವಾರ ಮಧ್ಯಾಹ್ನ ಕೂಡ ಮಕ್ಕಳಿಗೆ ಬಿಸಿಯೂಟ ನೀಡಿದಾಗ ಅನ್ನದಲ್ಲಿ ಹಲ್ಲಿಯಂತ ಹುಳು ಕಂಡು ಬಂದಿವೆ. ಬಳಿಕ ಊಟ ಸೇವಿಸಿದ ಸುಮಾರು 36 ಮಕ್ಕಳಳು ವಾಂತಿ, ವಾಕರಿಕೆ ಮಾಡಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ಈ ವಿಷಯ ತಿಳಿದ ತಕ್ಷಣ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು. ಅದರಂತೆ ಕ್ರಮ ಕೈಗೊಂಡಿದ್ದಾರೆ. ಇದೀಗ ಎಲ್ಲ ಮಕ್ಕಳು ಗುಣಮುಖರಾಗಿ, ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಅವರು ತಿಳಿಸಿದರು.
ಈ ಕುರಿತು ಮಹಿತಿ ನೀಡಿರುವ ಡಾ.ಶಶಿ ಪಾಟೀಲ್ ಅವರು, ಗುಡಿಸಾಗರ ಪ್ರಾಥಮಿಕ ಶಾಲೆಗೆ ಇಂದು ಮದ್ಯಾಹ್ನದ ಪೂರೈಸಿದ ಊಟದಲ್ಲಿ ಹಲ್ಲಿಯಂತ ಹುಳು ಕಂಡು ಬಂದಿದ್ದರಿಂದ, ಊಟ ಮಾಡಿದ್ದ ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಕೆಲವು ಮಕ್ಕಳು ಹೆದರಿಕೆಯಿಂದ ವಾಕರಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಿಂದ ಈ ಮಾಹಿತಿ ನನಗೆ ಬಂದ ತಕ್ಷಣ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಅಗರವಾಲ್ ಅವರಿಗೆ ತಕ್ಷಣ ಸ್ಥಳಕ್ಕೆ ತೆರಳಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿತ್ತು.