ಹುಬ್ಬಳ್ಳಿ:ಮುಂದಿನ ಚುನಾವಣೆ ನಂತರ 2024ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ ಅಂತ ಅವರ ಲೆಕ್ಕಾಚಾರ ಇದೆ. ನಮ್ಮ ಲೆಕ್ಕಾಚಾರದಲ್ಲಿ ಮುಂದಿನ ವರ್ಷ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅವರ ಲೆಕ್ಕಾಚಾರ ಉಲ್ಟಾ ಆಗೋ ಸಾಧ್ಯತೆಗಳಿವೆ. ನೋಡೋಣ ಯಾರ ಲೆಕ್ಕಾಚಾರ ನಿಜ ಆಗತ್ತೆ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕೆಲವರು ಬಿಜೆಪಿ ಬಿಟ್ಟು ಬರ್ತೀದಾರೆ. ಬಿಜೆಪಿ ಬಿಟ್ಟು ಯಾಕೆ ಬರ್ತೀದಾರೆ ಎಂದು ಅವರನ್ನೇ ಕೇಳಿ ಎಂದರು.
ಲೋಕಸಭೆ ಚುನಾವಣೆ ಸಿದ್ದತೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಗಾಗಲೇ ಪಕ್ಷದಿಂದ ಸಿದ್ಧತೆಗಳು ನಡಿತಾ ಇವೆ. ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ. ಜತೆಗೆ ಪಕ್ಷದ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತೆರಳಿ ಯುಪಿಎ ಸರ್ಕಾರ ಮಾಡಿರುವಂತಹ ಕಾರ್ಯಕ್ರಮ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮಾಡಿರುವ ಕಾರ್ಯಕ್ರಮ ಹಾಗೂ ಬಿಜೆಪಿ ಅಧಿಕಾರಕ್ಕೆ ಬಂದು ಮಾಡಿರುವಂತಹ ಕರ್ಮಕಾಂಡಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಬಳಿಕ ಚುನಾವಣೆಗಾಗಿ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಸ್ವತಂತ್ರ ಬಂದು 75 ವರ್ಷ ಕಳಿಯಿತು. ಕಾಂಗ್ರೆಸ್ ಪಕ್ಷದ ಹಣ 700 ಕೋಟಿ, ಇದ್ದರೆ ಬಿಜೆಪಿ ಪಕ್ಷದ ಹಣ 8,500 ಸಾವಿರ ಕೋಟಿ ದಾಟಿದೆ. ಹಾಗೆ ಕೋವಿಡ್ ಸಮಯದಲ್ಲಿ ಪಿಎಂ ರಿಲೀಫ್ ಫಂಡ್ಗೆ 30 ಸಾವಿರ ಕೋಟಿ ಜಮೆಯಾಗಿತ್ತು. ಗುಜರಾತ್ನಲ್ಲಿ ಕ್ರಿಕೆಟ್ ಸ್ಟೇಡಿಯಂ ಕಟ್ಟಿದರು. ಆದರೇ ಇನ್ನಾದರೂ ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಬಿಜೆಪಿ ಪಕ್ಷದ ಕಟ್ಟಡಗಳನ್ನು ನಿರ್ಮಾಣ ಮಾಡಿತ್ತು. ಆದರೆ ಆಸ್ಪತ್ರೆಗಳನ್ನು ಮಾತ್ರ ನಿರ್ಮಾಣ ಮಾಡಲಿಲ್ಲ. ಇದರಲ್ಲೆ ಜನರಿಗೆ ತಿಳಿಯುತ್ತದೆ ಸಾಹುಕಾರ ಪಕ್ಷ ಯಾರದು ಅನ್ನೋದು ಎಂದು ಹರಿಹಾಯ್ದರು.