ಹುಬ್ಬಳ್ಳಿ :ಆಗಸ್ಟ್ 7 ರಂದು ಆರ್ಟಿಪಿಸಿಆರ್ ವರದಿ (RT-PCR Report) ಇಲ್ಲದೆ ಮಹಾರಾಷ್ಟ್ರದಿಂದ ಬಸ್ ಮೂಲಕ ನಗರಕ್ಕೆ ಆಗಮಿಸಿದ 10 ಜನರ ಪೈಕಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.
ಬಸ್ ಮೂಲಕ ಆಗಮಿಸಿದ 10 ಜನರಲ್ಲಿ ಆರ್ಟಿಪಿಆರ್ ವರದಿ ಇರಲಿಲ್ಲ. ಈ ಪೈಕಿ 8 ಜನರಿಗೆ ವೈದ್ಯಕೀಯ ಕಾರಣಗಳನ್ನು ನೀಡಿದ್ದರು. ಹಾಗಾಗಿ, ಅವರ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ತಪಾಸಣೆ ಮಾಡಿ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇನ್ನುಳಿದ ಇಬ್ಬರನ್ನು ನಗರದ ಅಂಜುಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಓದಿ : ಕೇರಳ ಅಷ್ಟೇ ಅಲ್ಲ, ತಮಿಳುನಾಡಿನಿಂದ ಬರಲು ಬೇಕು ಕೊರೊನಾ ನೆಗೆಟಿವ್ ರಿಪೋರ್ಟ್
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಉಲ್ಬಣಗೊಂಡಿರುವ ಹಿನ್ನೆಲೆ , ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಸಹ ಈ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಈ ಹಿನ್ನೆಲೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆರ್ಟಿಪಿಸಿಆರ್ ವರದಿ ಇಲ್ಲದೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.