ಕರ್ನಾಟಕ

karnataka

ETV Bharat / state

ಪುತ್ರಿಯ ಪ್ರೇಮ ವಿವಾಹಕ್ಕೆ ಕೋಪ... ಸಬ್‌ ರಿಜಿಸ್ಟ್ರಾರ್ ಕಚೇರಿಗೆ ನುಗ್ಗಿ ದಾಖಲೆ ಹರಿದು ಹಾಕಿದ ಪೇದೆ!

ಪುತ್ರಿಯ ಪ್ರೇಮ ವಿವಾಹದಿಂದ ಮನನೊಂದ ಕರ್ತವ್ಯನಿರತ ಪೇದೆಯೊರ್ವ ವಿವಾಹ ನೋಂದಣಿ ಕಚೇರಿಗೆ ನುಗ್ಗಿ ದಾಖಲೆ ಹರಿದು, ಗಲಾಟೆ ಮಾಡಿದ್ದಾರೆ.

ಪುತ್ರಿಯ ಪ್ರೇಮ ವಿವಾಹ ಸಬ್ ರಿಜಿಸ್ಟರ್ ಬುಕ್ ಹರಿದ ಕರ್ತವ್ಯನಿರತ ಪೇದೆ

By

Published : May 10, 2019, 1:25 AM IST

ಧಾರವಾಡ : ಪುತ್ರಿ ಪ್ರೇಮ ವಿವಾಹವಾಗಿದ್ದರಿಂದ ಮನನೊಂದ ಕರ್ತವ್ಯನಿರತ ಪೇದೆಯೊರ್ವ ಸಬ್ ರಿಜಿಸ್ಟ್ರಾರ್​​ ಕಚೇರಿಗೆ ನುಗ್ಗಿ ಮದುವೆ ನೋಂದಣಿ ದಾಖಲೆಗಳನ್ನು ಹರಿದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ನವಲಗುಂದ ಠಾಣೆಯ ಪೇದೆ ಎಸ್.ಎಚ್. ಹುಲಗೇರಿ ಗಲಾಟೆ ಮಾಡಿದ ಪೊಲೀಸ್ ಪೇದೆ. ಮಗಳು ಯುವಕನೋರ್ವನನ್ನು ಪ್ರೀತಿಸಿ ಮನೆಬಿಟ್ಟು ಬಂದು ಧಾರವಾಡ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು‌. ಈ ಸುದ್ದಿ ತಿಳಿದ ಆಕೆಯ ತಂದೆ ಹುಲಗೇರಿ ಕರ್ತವ್ಯದಲ್ಲಿದ್ದಾಗಲೇ ಸಮವಸ್ತ್ರದಲ್ಲಿ ಸಬ್ ರಿಜಿಸ್ಟ್ರಾರ್​​ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾನೆ.

ಪುತ್ರಿಯ ಪ್ರೇಮ ವಿವಾಹ ಸಬ್ ರಿಜಿಸ್ಟರ್ ಬುಕ್ ಹರಿದ ಕರ್ತವ್ಯನಿರತ ಪೇದೆ

ಮದುವೆ ದಾಖಲೆ ಪತ್ರಗಳನ್ನು ತೋರಿಸುವಂತೆ ಕೇಳಿದ ಪೇದೆ ಅವುಗಳನ್ನೆಲ್ಲ ಹರಿದು ಹಾಕಿದ್ದಾನೆ. ಈ ಸಂದರ್ಭದಲ್ಲಿ ಆತನನ್ನು ಕಚೇರಿಯೊಳಗೆ ಕೂಡಿ ಹಾಕಿದ ಸಿಬ್ಬಂದಿ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಕಚೇರಿ ಬೀಗ ತೆರೆದು ಗಲಾಟೆ ಮಾಡುತ್ತಿದ್ದ ಪೇದೆಯನ್ನು ವಶಕ್ಕೆ ಪಡೆದರು.

ಕಚೇರಿಗೆ ಬಂದು ಗಲಾಟೆ ಮಾಡಿ ವಿವಾಹ ನೋಂದಣಿ ದಾಖಲೆ‌ ಹರಿದು ಹಾಕಿದ ಹಿನ್ನೆಲೆಯಲ್ಲಿ ಆತನ ಮೇಲೆ ಉಪನೋಂದಣಾಧಿಕಾರಿ ಸೌಮ್ಯಾ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಸದ್ಯ ಉಪನಗರ ಠಾಣೆ ಪೊಲೀಸರು ಹುಲಗೇರಿ ಅವರನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.

ABOUT THE AUTHOR

...view details