ಧಾರವಾಡ: ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ನಿಷೇಧ ಹೇರಿದ್ದು, ಇದರಿಂದ ಗಣಪತಿ ಮೂರ್ತಿ ತಯಾರಕರ ಬದುಕು ಇದೀಗ ಅತಂತ್ರಗೊಂಡಿದೆ. ಹೀಗಾಗಿ ಗಣೇಶ ಮೂರ್ತಿಯೊಂದಿಗೆ ಕೆರೆಗೆ ಹಾರಲು ಕಲಾವಿದನ ಕುಟುಂಬವೊಂದು ನಿರ್ಧರಿಸಿದ್ದು ಬೆಳಕಿಗೆ ಬಂದಿದೆ.
ಸಾರ್ವಜನಿಕ ಗಣೇಶೋತ್ಸವ ನಿಷೇಧ: ಕೆರೆಗೆ ಹಾರಲು ನಿರ್ಧರಿಸಿದ ಮೂರ್ತಿ ತಯಾರಕ
ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಬ್ರೇಕ್ ಹಾಕಿದ ಹಿನ್ನೆಲೆ ಗಣೇಶ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗಣೇಶ ಮೂರ್ತಿಯೊಂದಿಗೆ ಕೆರೆಗೆ ಹಾರುತ್ತೇವೆಂದ ಕಲಾವಿದ
ನಗರದ ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಕುಟುಂಬ ವಿಡಿಯೋ ಹರಿಬಿಟ್ಟು ತಮ್ಮ ನೋವು ತೋಡಿಕೊಂಡಿದ್ದಾರೆ. ಗಣೇಶೋತ್ಸವಕ್ಕೆ ಅನುಮತಿ ಇಲ್ಲದಿದ್ರೆ ಗಣೇಶ ಮೂರ್ತಿಗಳೊಂದಿಗೆ ಕೆರೆಗೆ ಹಾರುವುದಾಗಿ ವಿಡಿಯೋ ಮಾಡಿದ್ದಾರೆ.
ಮೊದಲು ಗಣಪತಿ ಆರ್ಡರ್ ಕೊಟ್ಟು ಇದೀಗ ಗಣಪತಿ ಮೂರ್ತಿ ಬೇಡ ಅಂತಿದ್ದಾರೆ. ಹೀಗಾದ್ರೆ ನಾವು ಬದುಕುವುದು ಹೇಗೆ ಎಂದು ಕಲಾವಿದ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಹಲವು ಬಾರಿ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.