ಹುಬ್ಬಳ್ಳಿ :ಮಂಟೂರ ರಸ್ತೆಯಲ್ಲಿ ಹಾಕಲಾಗಿದ್ದ ಮೀನು ಮಾರುಕಟ್ಟೆಯನ್ನು ತಕ್ಷಣವೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸ್ಥಳೀಯ ರೈತರು ಎತ್ತಿನ ಚಕ್ಕಡಿಯನ್ನು ಓಡಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.
ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹಿಸಿ ಚಕ್ಕಡಿ ಮೂಲಕ ಪ್ರತಿಭಟಿಸಿದ ರೈತರು - Hubballi fish market relocation
ನಗರದ ವೀರಾಪೂರ ಓಣಿ, ಯಲ್ಲಾಪುರ ಓಣಿಯ ರೈತರು ತಮ್ಮ ಹೊಲಗಳಿಗೆ ತೆರಳಲು ಆಗುತ್ತಿಲ್ಲ. ಸಾಕಷ್ಟು ತೊಂದರೆ ಮಾಡಿದ್ದಾರೆ. ಮೀನಿನ ವಾಸನೆಗೆ ಹಸುಗಳು ಸಹ ತೊಂದರೆ ಅನುಭವಿಸುತ್ತಿವೆ..
ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹಿಸಿ ಚಕ್ಕಡಿ ಮುಖಾಂತರ ಪ್ರತಿಭಟನೆ ಮಾಡಿದ ರೈತರು
ಮೀನು ಮಾರುಕಟ್ಟೆ ತೆರೆದಿದ್ದರಿಂದ ನಗರದ ವೀರಾಪೂರ ಓಣಿ, ಯಲ್ಲಾಪುರ ಓಣಿಯ ರೈತರು ತಮ್ಮ ಹೊಲಗಳಿಗೆ ತೆರಳಲು ಆಗುತ್ತಿಲ್ಲ. ಸಾಕಷ್ಟು ತೊಂದರೆ ಮಾಡಿದ್ದಾರೆ. ಮೀನಿನ ವಾಸನೆಗೆ ಹಸುಗಳು ಸಹ ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಪಾಲಿಕೆ ಆಯುಕ್ತರು ಆದಷ್ಟು ಬೇಗ ಅಲ್ಲಿರುವ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಬೇಕು ಮತ್ತು ಮಂಟೂರ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಮನವಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.
Last Updated : Sep 21, 2020, 6:23 PM IST