ಧಾರವಾಡ:ಕೇಂದ್ರ ಸರ್ಕಾರ ಸಿಎಎ ವಿಧೇಯಕ ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ, ಮುಸ್ಲಿಂ ಧರ್ಮಗುರುಗಳು ಹಾಗೂ ಇತರರು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಧಾರವಾಡ: ಪೌರತ್ವ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಮರಿಂದ ಪ್ರತಿಭಟನೆ
ಕೇಂದ್ರ ಸರ್ಕಾರ ಸಿಎಎ ವಿಧೇಯಕ ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ ಮುಸ್ಲಿಂ ಧರ್ಮಗುರುಗಳು ಹಾಗೂ ಇತರರು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಧಾರವಾಡದಲ್ಲಿ ಪೌರತ್ವ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
ಉಲ್ಮಾ-ಎ-ಶಹರ ಸಮಿತಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಮುಸ್ಲಿಮರು, 'ವಂದೇ ಮಾತರಂ' ಗೀತೆಯೊಂದಿಗೆ ಧರಣಿ ಆರಂಭಿಸಿ, ಪೌರತ್ವ (ತಿದ್ದುಪಡಿ) ವಿಧೇಯಕವನ್ನು ರಾಷ್ಟ್ರಪತಿ ಅವರು ಕೂಡಲೇ ವಾಪಸ್ ಕಳಿಸಿ, ಪುನರ್ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಮಾಡಬೇಕು. ಅದೇ ರೀತಿ ಕೇಂದ್ರವೂ ಕೂಡಾ ತನ್ನ ಹಠಮಾರಿ ಧೋರಣೆಯಿಂದ ಹಿಂದೆ ಸರಿದು,ಪೌರತ್ವ ಕಾಯ್ದೆ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದರು.