ಹುಬ್ಬಳ್ಳಿ: ಕುಡಿಯುವ ನೀರಿನ ಸರಬರಾಜನ್ನು ಖಾಸಗೀಕರಣ ಮಾಡಲು ನಿರ್ಧರಿಸಿರುವುದನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದೆ.
ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಸಮಿತಿಯ ಸದಸ್ಯರು, ಕುಡಿಯುವ ನೀರಿನ ಸರಬರಾಜುನ್ನು ಲೂಟಿಕೋರ ಖಾಸಗಿ ಕಂಪನಿಗಳಿಗೆ ನೀಡಬಾರದು. ನೀರು ಸರಬರಾಜು ಹಾಗೂ ನಿರ್ವಹಣೆ ಜಲ ಮಂಡಳಿಯೇ ನಿರ್ವಹಿಸಿಲಿ. ನಾಗರಿಕರ ಮೇಲೆ ಆರ್ಥಿಕ ಹೊರೆ ನಿಲ್ಲಿಸಲಿ ಎಂದು ಆಗ್ರಹಿಸಿದರು.
ಕುಡಿಯುವ ನೀರಿನ ಸರಬರಾಜು ಖಾಸಗೀಕರಣ ವಿರೋಧಿಸಿ ಪ್ರತಿಭಟನೆ ಇನ್ನು ಪ್ರತಿಯೊಬ್ಬರ ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಕೂಡ ಒಂದಾಗಿದೆ. ಆದರೆ ನೀರಿನ ಸರಬರಾಜನ್ನು ಖಾಸಗಿಯವರಿಗೆ ಒಪ್ಪಿಸಿರುವುದು ಸರಿಯಲ್ಲ. ಹಾಗೆಯೇ ಬಾಟಲ್ ನೀರಿನ ದಂಧೆಯನ್ನೂ ವಿರೋಧಿಸುತ್ತೇವೆ. ಕರ್ನಾಟಕದಲ್ಲಿ ಎಲ್ಲಾ ತರಹದ ನೀರಿನ ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನೀರು ಸರಬರಾಜಿಗೆ ಸರ್ಕಾರಿ ಸಂಸ್ಥೆಗಳನ್ನು ಪ್ರಜಾತಂತ್ರಗೊಳಿಸಿ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಕ್ರಮ ಜರುಗಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಸದಸ್ಯ ಅಮೃತ ಈಜಾರೆ ಒತ್ತಾಯಿಸಿದರು.