ಧಾರವಾಡ: ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದನ್ನು ತಡೆಯಲು ಸರ್ಕಾರ ಕಾನೂನುಗಳನ್ನು ರೂಪಿಸಿದೆ. ಕಾನೂನಿನ ಪ್ರಕಾರ, ಯಾವುದೇ ಆಸ್ಪತ್ರೆಗಳಲ್ಲಾಗಲಿ ಅಥವಾ ಲ್ಯಾಬ್ಗಳಲ್ಲಾಗಲಿ ತಾಯಿ ಗರ್ಭದಲ್ಲಿರುವ ಲಿಂಗ ಪತ್ತೆ ಮಾಡುವ ಹಾಗಿಲ್ಲ. ಹಾಗಾದ್ರೆ ಧಾರವಾಡ ಜಿಲ್ಲೆಯುಲ್ಲಿ ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳಿವೆಯೇ, ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್ ಹೋಂ ಗಳನ್ನು ನಡೆಸುತ್ತಿದ್ದಾರೆಯೇ ಎಂಬುದರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಕಾಲ ಅದೆಷ್ಟೇ ಮುಂದುವರೆದರೂ ಕೆಲವು ವಿಚಾರಗಳು ಮಾನವನಿಂದ ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ. ಗಂಡು ಮಗುವಿನ ಹಂಬಲ - ಹೆಣ್ಣಿಗೆ ತಾತ್ಸಾರ ಅದರಲ್ಲೊಂದು. ಹಾಗಾಗಿ ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಹೇಯ ಕೃತ್ಯ ಇನ್ನೂ ಹಲವೆಡೆ ಮುಂದುವರೆದಿದೆ. ತಾಯಿ - ಮಗುವಿನ ರಕ್ಷಣೆಗೆ ಸದುಪಯೋಗವಾಗಲೆಂದು ತೆರದ ಸ್ಕಾನಿಂಗ್ ಸೆಂಟರ್ಗಳು ಇದೀಗ ಕಾನೂನು ಬಾಹಿರ ಕೃತ್ಯಗಳಲ್ಲಿ ಬಳಕೆಯಾಗುತ್ತಿರುವುದು ದುರಂತವೇ ಸರಿ. ಆದರೆ ಧಾರವಾಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದಿಲ್ಲ ಎಂಬುದು ಆಶಾದಾಯಕ ವಿಚಾರ.
ಪ್ರಸವ ಪೂರ್ವ ಲಿಂಗ ಪತ್ತೆ-ಹೆಣ್ಣು ಭ್ರೂಣ ಹತ್ಯೆ:
ಈ ಕುರಿತು ಈಟಿವಿ ಭಾರತದೊಂದಿಗೆ ಡಿಎಚ್ಒ ಡಾ. ಯಶವಂತ ಮದೀನಕರ ಮಾತನಾಡಿ, ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು ಅನಧಿಕೃತ ನರ್ಸಿಂಗ್ ಹೋಂ ಗಳನ್ನು ನಡೆಸುತ್ತಿಲ್ಲ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳು ಇಲ್ಲ, ಅಂತಹ ವಿಚಾರ ಇದ್ದರೂ ಈವರೆಗೆ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಅಲ್ಟ್ರಾ ಸ್ಕ್ಯಾನಿಂಗ್ ಕೇಂದ್ರಗಳು: