ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆ: ರೈತರಿಗೆ ಹುಳಿಯಾದ ಮಾವು - Premature Rain Destroys The Mango Crop

ಕಳೆದ ವರ್ಷ ಉತ್ತಮ ಮಳೆಯಾಗಿ ಉತ್ತಮ ಇಳುವರಿ ಬಂದಿದ್ರೂ ಕೊರೊನಾ ವೈರಸ್​​ನಿಂದ ಸೂಕ್ತ ಮಾರುಕಟ್ಟೆ ಸಿಗದೆ ಕಂಗಾಲಾಗಿದ್ದ ಮಾವು ಬೆಳೆಗಾಗಾರರು ಈ ವರ್ಷ ಅಕಾಲಿಕ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ.

Dharwad
ಅಕಾಲಿಕ ಮಳೆಗೆ ಮಾವಿನ ಬೆಳೆ ನಾಶ

By

Published : Apr 27, 2021, 12:13 PM IST

ಧಾರವಾಡ:ಪ್ರತೀ ವರ್ಷ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಮಾವು ಬೆಳೆಗಾರರಿಗೆ ಈ ಬಾರಿ ಕೊರೊನಾ ಎರಡನೇ ಅಲೆ ಜೊತೆಗೆ ಅಕಾಲಿಕ ಮಳೆ ಬರೆ ಎಳೆದಿದ್ದು, ಭರ್ಜರಿ ಇಳುವರಿ ಕನಸು ಕಂಡಿದ್ದ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ಅಕಾಲಿಕ ಮಳೆಗೆ ಮಾವಿನ ಬೆಳೆ ನಾಶ

ಧಾರವಾಡ ಹೊರವಲಯದಲ್ಲಿರುವ ಕೆಲಗೇರಿಯಲ್ಲಿ ಬಹತೇಕ ರೈತರು ಮಾವು ಬೆಳೆಯುತ್ತಾರೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮಾವು ಬೆಳೆ ನೆಲಕ್ಕುರುಳುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿದ್ದರೂ ಕೊರೊನಾ ವೈರಸ್​ನಿಂದ ಸೂಕ್ತ ಮಾರುಕಟ್ಟೆ ಸಿಗದೇ ರೈತರು ಕಂಗಾಲಾಗಿದ್ದರು.

ಈ ವರ್ಷ ಅಕಾಲಿಕ ಮಳೆಯಿಂದಾಗಿ ಮಾವು ಮರದಲ್ಲೇ ಕೊಳೆಯುತ್ತಿದ್ದು, ಮಾವು ಬೆಳೆಗಾರರು ಮೂರರಿಂದ ನಾಲ್ಕು ಲಕ್ಷ ರೂ. ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.

ಓದಿ:ಸಹ್ಯಾದ್ರಿ ಕಾಲೇಜು ಜಾಗ ಪರಭಾರೆಗೆ ಮುಂದಾದ ಜಿಲ್ಲಾಡಳಿತ: ಹಳೇ ವಿದ್ಯಾರ್ಥಿಗಳಿಂದ ಆಕ್ರೋಶ

ABOUT THE AUTHOR

...view details