ಧಾರವಾಡ : ಕಳೆದ ವರ್ಷ ಕೊರೊನಾ, ಈ ವರ್ಷ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಎದುರಿಸುವ ಮಾವು ಬೆಳೆಗಾರರು ಪ್ರಸ್ತುತ ವರ್ಷದಲ್ಲಿ ಬದಲಾದ ವಾತಾವರಣ ಆತಂಕಕ್ಕೀಡು ಮಾಡಿದೆ.
ಕಳೆದ ಹಲವಾರು ವರ್ಷದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಾವು ಬೆಳೆಗಾಗಾರರು ಇದೀಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಹೌದು ನಗರದ ಕೆಲಗೇರಿ ಬಳಿಯಿರುವ ಮಾವಿನ ತೋಟದಲ್ಲಿ ಎಲ್ಲಿ ನೋಡಿದ್ರೂ ಮಾವಿನ ಮರದಲ್ಲಿ ಹೂವು ಕಾಣಿಸುತ್ತವೆ. ಆದ್ರೆ ಅವು ಮರದಿಂದ ಉದುರುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ.
ಮಾವಿನ ಮರಗಳಲ್ಲಿನ ಹೂವು ನೋಡಿದ್ರೆ ಸಂತೋಷ ಪಡುತ್ತಿದ್ದ ಮಾವು ಬೆಳೆಗಾರರು ಅವು ಉದುರುವುದನ್ನು ಕಂಡು ಚಿಂತೆಗೀಡಾಗುವಂತೆ ಮಾಡಿದೆ. ಈ ದಿನಗಳಲ್ಲಿ ಮಾವು ಹೂಬಿಟ್ಟು ಕಾಯಿಕಟ್ಟುವ ದಿನಗಳು ಆದ್ರೆ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹೂವು ಉದುರಿ ಬೆಳೆಗಾರರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ.