ಧಾರವಾಡ: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಯುವತಿಯೊಬ್ಬಳು ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ಯುವತಿ: ಕಠಿಣ ಶಿಕ್ಷೆಗೆ ಮುತಾಲಿಕ್ ಆಗ್ರಹ - ಪಾಕ್ ಪರ ಘೋಷಣೆ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಯುವತಿಯೊಬ್ಬಳು ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ್ರೋಹ ಎನ್ನುವುದು ಒಂದು ಕ್ಯಾನ್ಸರ್ ವೈರಸ್ ಇದ್ದಂತೆ. ಮೊದಲು ಕಾಶ್ಮೀರದಲ್ಲಿ ಹುಟ್ಟಿಕೊಂಡಿದ್ದು, ಕರ್ನಾಟಕದ ನಾನಾ ಭಾಗಗಳಿಗೆ ಹಬ್ಬಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರ ಆ ಪಾರ್ಕಿನಲ್ಲಿ ಈ ಘೋಷಣೆ ಕೂಗಿದ ಇವಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ.
ದೇಶದ್ರೋಹದ ಕೃತ್ಯ ಅನ್ನುವುದು ಇವರಿಗೆ ಹುಡುಗಾಟಿಕೆ ಆಗಿದೆ. ದೇಶದ್ರೋಹಿ ಹುಡುಗಾಟಿಕೆಗೆ ಎಂದೆಂದೂ ಅವಕಾಶ ಮಾಡಿಕೊಡಬಾರದು. ಸಂವಿಧಾನ, ಕಾನೂನು ಸುವ್ಯವಸ್ಥೆ ಇರೋದೇ ದೇಶದ ಸುರಕ್ಷತೆಗೆ. ದೇಶದ್ರೋಹಿಗಳಿಗೆ ಯಾವ ಉದ್ದೇಶಕ್ಕೆ ಜಾಮೀನು ನೀಡಬೇಕು? ಅವಳಿಗೆ ಜೀವಾವಧಿ ಶಿಕ್ಷೆ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು. ವಿಚಾರಣೆ, ಸಮಿತಿ ಅಂತೆಲ್ಲಾ ಯಾವುದೇ ನಾಟಕ ಮಾಡುವಂತಿಲ್ಲ. ಇನ್ನು ಮುಂದೆ ಈ ರೀತಿ ಮಾಡುವವರಿಗೆ ಎಚ್ಚರಿಕೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.