ಕರ್ನಾಟಕ

karnataka

ETV Bharat / state

ಸಿಎಎ ಬಗ್ಗೆ ಜೋಶಿ-ಶೆಟ್ಟರ್​ ಜಾಗೃತಿ.. ಮುಸ್ಲಿಂ ಬಾಂಧವರ ಮನೆ ಮನೆಗೆ ತೆರಳಿ ಅಭಿಯಾನ - ಪೌರತ್ವ ತಿದ್ದುಪಡಿ ಕಾಯ್ದೆ ಸುದ್ದಿ

ದೇಶಾದ್ಯಂತ ಮುಸ್ಲಿಂ ಸಮುದಾಯವೂ ಸೇರಿ ಸಾಕಷ್ಟು ಜನರಿಂದ ಸಿಎಎ ಕಾಯ್ದೆ ವಿರುದ್ಧ ಕಹಳೆ ಮೊಳಗಿದೆ. ಅದರಲ್ಲೂ ಅಲ್ಪಸಂಖ್ಯಾತರಲ್ಲಿ ಆತಂಕ ಮನೆ ಮಾಡಿದೆ. ಇದನ್ನ ಹೋಗಲಾಡಿಸೋದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಮುಸ್ಲಿಂ ಸಮುದಾಯದವರ ಮನೆ ಮನೆಗೆ ತೆರಳಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿರೋದು ವಿಶೇಷ.

Prahlad Joshi and Jagadish Shetter
ಜೋಶಿ-ಶೆಟ್ಟರ್​

By

Published : Jan 6, 2020, 11:40 AM IST

ಹುಬ್ಬಳ್ಳಿ:ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಮೂಡಿರುವ ಗೊಂದಲ ಹೋಗಲಾಡಿಸುವ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಅವರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು.

ಸಿಎಎ ಬಗ್ಗೆ ಜೋಶಿ-ಶೆಟ್ಟರ್​ ಜಾಗೃತಿ ಅಭಿಯಾನ

ನಗರದ ವೀರಾಪುರ, ಯಲ್ಲಾಪುರ ಓಣಿ ಸೇರಿ ಹಲವು ಕಡೆ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ದೇಶಾದ್ಯಂತ ಮುಸ್ಲಿಂ ಸಮುದಾಯ ಕಾಯ್ದೆ ವಿರೋಧ ಮಾಡುತ್ತಿರುವ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಮುಸ್ಲಿಂ ಸಮಾಜದವರ ಮನೆ ಮನೆಗೆ ತೆರಳಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿರೋದು ವಿಶೇಷ.

ಸಿಎಎ ಬಗ್ಗೆ ಜೋಶಿ-ಶೆಟ್ಟರ್​ ಜಾಗೃತಿ ಅಭಿಯಾನ

ಈ ಕಾಯ್ದೆ ಜಾರಿಗೆ ಬಂದಿರುವುದರಿಂದ ನಮ್ಮ ದೇಶದಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆ ಇಲ್ಲ. ಒಂದೇ ಜಾತಿ ಗುರಿಯಾಗಿಸಿ ಈ ಕಾಯ್ದೆ ತಂದಿಲ್ಲ ಎಂದರು. ಈ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿದೆ. ಅದನ್ನು ಹೋಗಲಾಡಿಸುವ ದೃಷ್ಟಿಯಿಂದ ಇವತ್ತು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಉಭಯ ನಾಯಕರು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಿದರು.

ಸಿಎಎ ಬಗ್ಗೆ ಜೋಶಿ-ಶೆಟ್ಟರ್​ ಜಾಗೃತಿ ಅಭಿಯಾನ

ABOUT THE AUTHOR

...view details