ಕರ್ನಾಟಕ

karnataka

ETV Bharat / state

ಪಾವತಿಯಾಗದ ಮೂರು ತಿಂಗಳ ಬಿಲ್; ಬಿಆರ್​ಟಿಎಸ್​ ಬಸ್​ ನಿಲ್ದಾಣದಲ್ಲಿ ವಿದ್ಯುತ್​ ಸಂಪರ್ಕ​​ ಕಡಿತ

ಲಾಕ್​ಡೌನ್​ ಸಡಿಲಿಕೆ ಬಳಿಕ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಆದರೂ ಬಿಆರ್​ಟಿಎಸ್ ಬಸ್ ನಿಲ್ದಾಣದ ವಿದ್ಯುತ್​ ಬಿಲ್ ಪಾವತಿಯಾಗಿಲ್ಲ. ಸುಮಾರು 4.5 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ವಿದ್ಯುತ್​ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ..

Power disconnection at BRTS bus station
ನಗರದ ರೈಲ್ವೆ ನಿಲ್ದಾಣದಲ್ಲಿರುವ ಬಿಆರ್​ಟಿಎಸ್ ನಿಲ್ದಾಣ

By

Published : Sep 5, 2020, 6:12 PM IST

ಹುಬ್ಬಳ್ಳಿ:ಹಣ​ ಪಾವತಿ ಮಾಡದ ಕಾರಣ ಹೆಸ್ಕಾಂ ಸಿಬ್ಬಂದಿಯು ಇಲ್ಲಿನ ಬಿಆರ್​ಟಿಎಸ್​ ಬಸ್​ ನಿಲ್ದಾಣದಲ್ಲಿನ ವಿದ್ಯುತ್​ ಸಂಪರ್ಕವನ್ನು​​ ಕಡಿತ ಮಾಡಿದೆ. ಇದರಿಂದ ನಿಲ್ದಾಣ ಕತ್ತಲೆಯ ಕೂಪವಾಗಿದೆ. ಸಿಬ್ಬಂದಿ ಹಾಗೂ ಪ್ರಯಾಣಿಕರು ಕತ್ತಲೆಯಲ್ಲಿಯೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಟಾರ್ಚ್​ ಬೆಳಕಿನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ

ನಗರದ ರೈಲ್ವೆ ನಿಲ್ದಾಣದಲ್ಲಿರುವ ಬಿಆರ್​ಟಿಎಸ್ ನಿಲ್ದಾಣದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಸಿಬ್ಬಂದಿ ಟಾರ್ಚ್​ ಬೆಳಕಿನಲ್ಲಿಯೇ ಕೆಲಸ ಮಾಡಬೇಕಿದೆ. ಬಿಆರ್​ಟಿಎಸ್ ಆರಂಭವಾಗಿ ಎರಡು ವರ್ಷ ಕಳೆಯುತ್ತಾ ಬಂದರು ಸಣ್ಣ-ಪುಟ್ಟ ಕೆಲಸಗಳನ್ನು ಇನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ನಿರ್ವಹಣೆ ಹಂತದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಲಾಕ್​ಡೌನ್​ ಸಡಿಲಿಕೆ ಬಳಿಕ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಆದರೂ ಬಸ್ ನಿಲ್ದಾಣದ ವಿದ್ಯುತ್​ ಬಿಲ್ ಪಾವತಿಯಾಗಿಲ್ಲ. ಸುಮಾರು 4.5 ಲಕ್ಷ ರೂ. ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ವಿದ್ಯುತ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.

ನಗರದ ರೈಲ್ವೆ ನಿಲ್ದಾಣದಲ್ಲಿರುವ ಬಿಆರ್​ಟಿಎಸ್ ನಿಲ್ದಾಣ

ಈ‌ ನಿಲ್ದಾಣದಿಂದ ನಿತ್ಯ 144 ಬಸ್​ಗಳು ಸಂಚರಿಸುತ್ತವೆ. 4-5 ಸಾವಿರ ಪ್ರಯಾಣಿಕರು ಓಡಾಡುತ್ತಾರೆ. ನಿತ್ಯ 45-50 ಸಾವಿರ ಆದಾಯವಿದೆ. ಆದರೂ ಮೂರು ತಿಂಗಳ ವಿದ್ಯುತ್ ಬಿಲ್​ ಕಟ್ಟಲು ಬಿಆರ್​ಟಿಎಸ್​ಗೆ ಸಾಧ್ಯವಾಗಿಲ್ಲ. ಇದರಿಂದ ಕತ್ತಲೆಯಲ್ಲಿ ಪ್ರಯಾಣಿಸುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಬಿಆರ್​ಟಿಎಸ್​ ಬಸ್​ ನಿಲ್ದಾಣದಲ್ಲಿ ವಿದ್ಯುತ್​ ಸಂಪರ್ಕ​​ ಕಡಿತ

ABOUT THE AUTHOR

...view details