ಹುಬ್ಬಳ್ಳಿ:ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಈಗ ಸ್ಮಾರ್ಟ್ ಆಗುತ್ತಿದೆ. ಆದ್ರೆ ಸ್ಮಾರ್ಟ್ ಆಗಬೇಕು ಅಂದ್ರೆ ಅಲ್ಲಿ ಕಾಮಗಾರಿನೂ ಕೂಡಾ ಸ್ಮಾರ್ಟ್ ಆಗಿರಬೇಕು. ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅಷ್ಟಕ್ಕೂ ಅಲ್ಲಿನ ಕಾಮಗಾರಿ ಹೇಗೆ ನಡೆದಿದೆ ಅನ್ನೋದನ್ನು ನೀವೇ ನೋಡಿ.
ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ಮಾರ್ಟ್ ಸಿಟಿ ಎಂದು ಹೇಳಿದ ಹಾಗೆಯೇ ಕಾಮಗಾರಿ ನಡೆಯುತ್ತಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ಸುಮಾರು ಆರು ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಂದು ರಸ್ತೆ ನಿರ್ಮಿಸಿಬೇಕಾದ್ರೆ ಹಳೆ ರಸ್ತೆಯಲ್ಲಿನ ಒಳಚರಂಡಿ ತೆಗೆದು ಹೊಸ ಚರಂಡಿ ಹಾಕುವ ವ್ಯವಸ್ಥೆ ಮಾಡಬೇಕು. ಆದರೆ ಇಲ್ಲಿ ಎಲ್ಲಾ ಹಳೆ ಒಳಚರಂಡಿ ಮೇಲೆ ಹೊಸ ರಸ್ತೆ ನಿರ್ಮಿಸಿ, ಹಣ ದೋಚುತ್ತಿರುವ ಆರೋಪ ಕೇಳಿ ಬರುತ್ತಿದೆ.