ಕರ್ನಾಟಕ

karnataka

ETV Bharat / state

ರಾಜಕಾರಣಿಗಳ ಮಕ್ಕಳು ಸಹ ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿರಬಹುದು: ಎಸ್.ಆರ್.ಪಾಟೀಲ - Dharwad latest news

ಡ್ರಗ್ಸ್ ಎನ್ನುವ ಪಿಡುಗಿಗೆ ಯುವ ಜನತೆ ಅಂಟಿಕೊಂಡಿದ್ದಾರೆ. ಇದರ ಮೂಲವನ್ನು ಪತ್ತೆ ಮಾಡಬೇಕು. ಅದರಲ್ಲಿ ರಾಜಕಾರಣಿಗಳ ಮಕ್ಕಳು ಕೂಡಾ ಭಾಗಿಯಾಗಿರುವ ಗುಮಾನಿ ಇದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಅನುಮಾನ ವ್ಯಕ್ತಪಡಿಸಿದ್ದಾರೆ.

S R Patil
ಎಸ್.ಆರ್.ಪಾಟೀಲ

By

Published : Sep 17, 2020, 9:33 PM IST

ಧಾರವಾಡ: ಈಗ ಕೇಳಿ ಬರುತ್ತಿರುವ ಡ್ರಗ್ಸ್ ಪ್ರಕರಣದಲ್ಲಿ ಕೇವಲ ಇಬ್ಬರು ನಟಿಯರು ಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ. ಅದರಲ್ಲಿ ರಾಜಕಾರಣಿಗಳ ಮಕ್ಕಳು ಕೂಡಾ ಭಾಗಿಯಾಗಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಸಂಶಯ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್ ಡ್ರಗ್ಸ್​ ನಂಟು ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿರುವ ಅವರು, ಡ್ರಗ್ಸ್ ಎನ್ನುವ ಪಿಡುಗಿಗೆ ಯುವ ಜನತೆ ಅಂಟಿಕೊಂಡಿದ್ದಾರೆ. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವ್ಯವಹಾರವಾಗಿದೆ. ಇದರ ಮೂಲವನ್ನು ಪತ್ತೆ ಮಾಡಬೇಕು. ಡ್ರಗ್ಸ್ ವ್ಯವಹಾರಕ್ಕೆ ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

ಎಸ್.ಆರ್.ಪಾಟೀಲ

ಹಿರಿಯ ನಾಯಕರಿಗೆ ಸೋನಿಯಾ ಮನ್ನಣೆ ನೀಡಿದ್ದಾರೆ...

ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿದ್ದಾರೆ ಎನ್ನಲಾದ ವಿಚಾರವಾಗಿ ಮಾತನಾಡಿದ ಅವರು, ಹಿರಿಯ ರಾಜಕಾರಣಿಗಳಿಗೆ ಅವರು ಮನ್ನಣೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ದಿನೇಶ್​ ಗುಂಡೂರಾವ್ ಸೇರಿದಂತೆ ಪಕ್ಷದಲ್ಲಿ ಸೋನಿಯಾ ಗಾಂಧಿ ಅವರು ಉನ್ನತ ಸ್ಥಾನ ನೀಡಿದ್ದಾರೆ. ಪಕ್ಷ ಸಂಘಟನೆಗೆ ಹಿರಿಯ ನಾಯಕರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಬಳಕೆ ಮಾಡಿಕೊಳ್ಳಲಿದ್ದಾರೆ. ಪಕ್ಷದಲ್ಲಿ ಯಾವ ಹಿರಿಯ ನಾಯಕರನ್ನೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ABOUT THE AUTHOR

...view details