ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ: ಈಟಿವಿ‌ ಭಾರತ ವರದಿ ಫಲಶೃತಿ

ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ವಾಹನ ಪಾರ್ಕಿಂಗ್ ತೆರವುಗೊಳಿಸಿದ್ದ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಈಗ ಟ್ಯಾಕ್ಸಿ ಪರ್ಮಿಟ್ ವಾಹನಗಳ ನಿಲುಗಡೆಗೆ ಅವಕಾಶ ನೀಡಿದೆ.

Parking allowed at Hubli Eidgah Maidan
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ

By

Published : Sep 20, 2022, 12:10 PM IST

Updated : Sep 20, 2022, 12:28 PM IST

ಹುಬ್ಬಳ್ಳಿ(ಧಾರವಾಡ):ತೀವ್ರ ವಿವಾದದ ನಡುವೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ವಾಹನ ನಿಲುಗಡೆಗೆ ಹು-ಧಾ ಮಹಾನಗರ ಪಾಲಿಕೆ ಕೊನೆಗೂ ಅವಕಾಶ ನೀಡಿದೆ. ಇಂದು ಬೆಳಗ್ಗೆಯಿಂದಲೇ ವಾಹನಗಳ ನಿಲುಗಡೆ ಪ್ರಾರಂಭವಾಗಿದೆ. ಈ ಕುರಿತಂತೆ ಈಟಿವಿ ಭಾರತ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಗಣೇಶ ಚತುರ್ಥಿ ಆಚರಣೆ ಅಂಗವಾಗಿ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ವಾಹನ ನಿಲುಗಡೆಯನ್ನು 13 ದಿನಗಳ ಕಾಲ ನಿರ್ಬಂಧಿಸಿ ಹು-ಧಾ ಪಾಲಿಕೆ ಆದೇಶ ಹೊರಡಿಸಿತ್ತು. ಆದ್ರೆ ಅವಧಿ ಮುಗಿದರೂ ಕೂಡ ಟ್ಯಾಕ್ಸಿ ನಿಲ್ಲಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ವಾಹನ ನಿಲುಗಡೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:ಈದ್ಗಾ ವಿವಾದ ಎಫೆಕ್ಟ್: ಪಾರ್ಕಿಂಗ್ ಇಲ್ಲ, ದುಡಿಮೆಯೂ ಇಲ್ಲ.. ಬಡಪಾಯಿಗಳ ಗೋಳು

ಈ ಪ್ರತಿಭಟನೆಗೆ ಮಣಿದ ಹು-ಧಾ ಪಾಲಿಕೆ ಮತ್ತೆ ಟ್ಯಾಕ್ಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮಹಾನಗರ ಪಾಲಿಕೆ, ಚೆನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್​ನಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಟ್ಯಾಕ್ಸಿ ಚಾಲಕರು ಕೂಡ ಈ ಮೊದಲಿನಂತೆ ತಮ್ಮ ವಾಹನಗಳನ್ನು ಈದ್ಗಾ ಮೈದಾನದಲ್ಲಿ ಪಾರ್ಕ್ ಮಾಡುತ್ತಿದ್ದಾರೆ.

Last Updated : Sep 20, 2022, 12:28 PM IST

ABOUT THE AUTHOR

...view details