ಕರ್ನಾಟಕ

karnataka

ETV Bharat / state

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಸಕಲ ಸಿದ್ಧತೆ.. NWKSRTC ಎಂಡಿ ಕೃಷ್ಣ ವಾಜಪೇಯಿ..

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಬಸ್ ನಿಲ್ದಾಣದ ಈಗಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ. ಈ ಹಿನ್ನೆಲೆ ಹಳೆ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುತ್ತಿದ್ದ ಎಲ್ಲಾ ಬಸ್‌ಗಳನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ..

bus
bus

By

Published : Jun 20, 2021, 7:27 PM IST

ಹುಬ್ಬಳ್ಳಿ: ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್​ಗಳ ಓಡಾಟಕ್ಕೆ ಅನುಮತಿ ನೀಡಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆ ಮೇರೆಗೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಬಸ್‌ಗಳ ಕಾರ್ಯಾಚರಣೆ ಆರಂಭವಾಗಲಿದೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಎಂಡಿ ಕೃಷ್ಣ ವಾಜಪೇಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣ ಕಡಿಮೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೆಲ ನಿಬಂಧನೆಗಳನ್ನು ವಿಧಿಸಿ ಬಸ್‌ಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ.

ಬಸ್‌ ನಿಲ್ದಾಣ ಶುಚಿಗೊಳಿಸ್ತಿರುವುದು..

ಹೀಗಾಗಿ, ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಗದಗ, ಬಾಗಲಕೋಟೆ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳ 9 ವಿಭಾಗಗಳ ವ್ಯಾಪ್ತಿಯಲ್ಲಿ ಬಸ್‌ಗಳು ಆರಂಭವಾಗಲಿವೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್‌ಗಳು ಸಂಚಾರ ಮಾಡಲಿವೆ. ಬಸ್​ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಬಸ್‌ಗಳು ಸಂಚರಿಸೋದಕ್ಕೆ ಸಿದ್ಧವಾಗಿರುವುದು..

ಕೋವಿಡ್ ಮಾರ್ಗಸೂಚಿ ಪ್ರಕಾರ ಸುರಕ್ಷಿತ ಕ್ರಮಗಳ ಪಾಲನೆ

ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಬಸ್‌ಗಳು, ಡಿಪೋಗಳು ಮತ್ತು ಬಸ್ ನಿಲ್ದಾಣಗಳನ್ನು ಸ್ಯಾನಿಟೈಜೇಷನ್ ಮಾಡಲಾಗಿದೆ. ಲಸಿಕೆ ಪಡೆದುಕೊಂಡಿರುವ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ವೈಯಕ್ತಿಕ ಬಳಕೆಗೆ ಸ್ಯಾನಿಟೈಸರ್ ನೀಡಲಾಗಿದೆ.

ಬಸ್‌ ಶುಚಿಗೊಳಿಸ್ತಿರುವ ಸಿಬ್ಬಂದಿ..

ನಗರ ಹಾಗೂ ಗ್ರಾಮೀಣ ಬಸ್ ಏಕಕಾಲಕ್ಕೆ ಪ್ರಾರಂಭ :

ಬಸ್‌ಗಳ ಒಟ್ಟು ಆಸನಗಳ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಿಂತು ಪ್ರಯಾಣಿಸಲು ಅವಕಾಶವಿರುವುದಿಲ್ಲ. ಬೆಳಗ್ಗೆಯಿಂದ ಸಂಜೆ 7 ಗಂಟೆಯವರೆಗೆ ಬಸ್‌ಗಳು ಸಂಚರಿಸಲಿವೆ. ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೋವಿಡ್ ಮಾರ್ಗಸೂಚಿ, ನಿರ್ದೇಶನಗಳ ಸಮರ್ಪಕ ಅನುಷ್ಠಾನಕ್ಕೆ ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸಲು ಅವರು ಮನವಿ ಮಾಡಿದ್ದಾರೆ.

ಬಸ್‌ ಶುಚಿಗೊಳಿಸ್ತಿರುವ ಸಿಬ್ಬಂದಿ

ಕೋವಿಡ್ ಪೂರ್ವದಲ್ಲಿ ಬಸ್ ಸಂಚಾರ

ಹುಬ್ಬಳ್ಳಿ ಗ್ರಾಮಾಂತರ :ವಿಭಾಗದಲ್ಲಿ 51 ಸಾಮಾನ್ಯ, ವೇಗದೂತ, ರಾಜಹಂಸ, ಸ್ಲೀಪರ್ ಮತ್ತು ವೋಲ್ವೋ ಸೇರಿ ಒಟ್ಟು 470 ಬಸ್‌ಗಳಿವೆ. ಕೋವಿಡ್ ಪೂರ್ವದಲ್ಲಿ 156 ಸಾಮಾನ್ಯ, 219 ವೇಗದೂತ,10 ರಾಜಹಂಸ,10 ವೋಲ್ವೊ, 10 ಎಸಿ ಸ್ಲೀಪರ್ ಮತ್ತು 14ನಾನ್ ಎಸಿ ಸ್ಲೀಪರ್ ಸೇರಿ ನಿತ್ಯ 419 ಮಾರ್ಗಗಳಲ್ಲಿ ಬಸ್‌ಗಳುಸಂಚರಿಸುತ್ತಿದ್ದವು. 1.35 ರಿಂದ 1.50 ಲಕ್ಷ ಕಿ.ಮೀ ಕ್ರಮಿಸುತ್ತಿದ್ದವು. ಒಂದು ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು. ಸಂಸ್ಥೆಗೆ 45 ರಿಂದ 50 ಲಕ್ಷ ರೂ. ಗಳಷ್ಟು ಸಾರಿಗೆ ಆದಾಯ ಸಂಗ್ರಹವಾಗುತ್ತಿತ್ತು.

ಅಂತರ್​ರಾಜ್ಯ ಬಸ್ ಸದ್ಯಕ್ಕಿಲ್ಲ

ಕೋವಿಡ್ ಪೂರ್ವದಲ್ಲಿ ಗೋವಾ,ಮಹಾರಾಷ್ಟ್ರ,ಆಂಧ್ರಪ್ರದೇಶ,ತೆಲಂಗಾಣ, ತಮಿಳುನಾಡು ಮುಂತಾದ ಅಂತರ ರಾಜ್ಯಗಳಿಗೆ ವೋಲ್ವೋ, ಸ್ಲೀಪರ್​, ರಾಜಹಂಸ ಮತ್ತು ವೇಗದೂತ ಸಾರಿಗೆಗಳು ಸೇರಿ ಹುಬ್ಬಳ್ಳಿಯಿಂದ 65 ಬಸ್‌ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದವು. ಸರ್ಕಾರದ ಅನುಮತಿ ಬಂದ ನಂತರದಲ್ಲಿ ಈ ಬಸ್‌ಗಳ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬಸ್‌ ಶುಚಿಗೊಳಿಸ್ತಿರುವ ಸಿಬ್ಬಂದಿ

ಹಳೆ ಬಸ್ ನಿಲ್ದಾಣದ ಬಸ್‌ಗಳ ಸ್ಥಳಾಂತರ

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿಯ ಪ್ರಯುಕ್ತ ಬಸ್ ನಿಲ್ದಾಣದ ಈಗಿರುವ ಕಟ್ಟಡವನ್ನು ತೆರವುಗೊಳಿಸುವ ಕೆಲಸ ಆರಂಭವಾಗಿದೆ. ಈ ಹಿನ್ನೆಲೆ ಹಳೆ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುತ್ತಿದ್ದ ಎಲ್ಲಾ ಬಸ್‌ಗಳನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.

ABOUT THE AUTHOR

...view details