ಹುಬ್ಬಳ್ಳಿ: ಲಾಕ್ಡೌನ್ ಸಮಯದಲ್ಲಿ ಮದ್ಯ ನಿಷೇಧಿಸಿ ಜನರ ಜೀವ ಉಳಿಸಬೇಕಿದ್ದ ರಾಜ್ಯ ಸರ್ಕಾರ, ತನ್ನ ಬೊಕ್ಕಸ ತುಂಬಿಸಿಕೊಳ್ಳಲು
ಮದ್ಯದಂಗಡಿ ಪುನಃ ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ನಗರದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಸರಿಯಲ್ಲ: ಎನ್ಎಸ್ಯುಐ
ಮದ್ಯ ಖರೀದಿಸುವವರು ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಲಾಗಿದೆ. ಹೀಗಾದರೆ ಸೋಂಕು ಹೆಚ್ಚಾಗುವುದು ನಿಶ್ಚಿತ. ಹಾಗಾಗಿ ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಎನ್ಎಸ್ಯುಐ ಆಗ್ರಹಿಸಿದೆ.
ಎನ್. ಎಸ್. ಯು. ಐ ಕಾರ್ಯಕರ್ತರು
ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮದ್ಯ ಖರೀದಿಸುವವರು ಯಾವುದೇ ನಿಯಮ ಪಾಲಿಸಿಲ್ಲ. ಅಲ್ಲದೆ ಸಾಮಾಜಿಕ ಅಂತರವನ್ನಂತೂ ಗಾಳಿಗೆ ತೂರಲಾಗಿದೆ. ಹೀಗಾದರೆ ಸೋಂಕು ಹೆಚ್ಚಾಗುವುದು ನಿಶ್ಚಿತ ಎಂದ ಅವರು, ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಮರಾಠೆ ಹಾಗೂ ಕಾರ್ಯದರ್ಶಿ ರೋಹಿತ್ ನ ಘೋಡಕೆ, ಶ್ರೇಯಾ ಹೀರೆಕೆರೂರ, ರಾಜೇಶ, ಸಮರ್ಥ ಉಪಸ್ಥಿತರಿದ್ದರು.